ಪುತ್ತೂರಿನ ವಿದ್ಯಾ ಸಂಸ್ಥೆಯಲ್ಲಿದ್ದಾನೆ ಮರಿ ʼಪ್ರಜ್ವಲ್‌ʼ – ಇವನಿಗಿದೆ ಮಚ್ಚೆ ರೋಗ ; ಇವನ ಕಾಟದಿಂದ ತಪ್ಪಿಸಲು ನೋಟಾ ಒತ್ತಿ ಕಾಲೇಜ್‌ ಬಿಟ್ಟವರೆಷ್ಟು!?

ಮಳೆಗಾಳದ ಬೊಳ್ಳದ ಹಾಗೆ ಸದ್ಯ ಎಲ್ಲರ ಮೊಬೈಲ್ ನಲ್ಲಿ ಹಾಸನದ ವಿಡಿಯೋಗಳು ಬರ್ತಾ ಇದೆ. ಒಂದು ವೇಳೆ ವಿಡಿಯೋ ಸಿಗದೆ ಹೋದರೆ ಗೋಂಕುರು ಕಪ್ಪೆಯಂತೆ ಗೆಳೆಯರಲ್ಲಿ ಗುಟುರು ಹಾಕಿ ಆದ್ರೂ ತಮ್ಮ ಮೊಬೈಲ್ಗೆ ವಿಡಿಯೋ ಹಾಕಿಸಿ ಹಾಸನದ ಪುರುಷನ ಕರಿ ಮಿಣ್ಣಿ ಎಲ್ಲರೂ ನೋಡಿದ್ದಾರೆ. ಆದ್ರೆ ಡಿಯರ್ ಪ್ರೆಂಡ್ಸ್ ನಿಮ್ಗೆ ಗೊತ್ತಿಲ್ಲದೆ ಇರುವ ಮರಿ ಪ್ರಜ್ವಲನೊಬ್ಬ ಪುತ್ತೂರಿನಲ್ಲೂ ಇದ್ದಾನೆ. ಇವನ ವಿಡಿಯೋಗಳು ಜಾಲತಾಣದಲ್ಲಿ ಜಾಲಡಿದರೆ ಕಾಣ ಸಿಗದಿದ್ದರೂ, ಅವನ ಕಾಮಕೇಳಿಯ ಸ್ಕ್ರೀನ್ ಶಾಟ್ ಗಳನ್ನು ಗಿಡಿ ಬೊಂಟೆ ಮಾಡಿದೆ. ಅದನ್ನು ಓದುಗರ ಮುಂದೆ ಬಿಚ್ಚಿಡುವ ಯತ್ನ ಈ ಲೇಖನ. ವಿದ್ಯಾಸಂಸ್ಥೆಯೊಂದರ ಮೇಲಿನ ಆಪಾರ ಗೌರವ, ಅಲ್ಲಿ ದುಡಿಯುತ್ತಿರುವ ಉದ್ಯೋಗಿಗಳ ಸ್ಥಾನ, ಮಾನ ಹಾಗೂ ಓದುತ್ತಿರುವ ವಿದ್ಯಾರ್ಥಿಗಳ ಮಾನದ ವಿಪರೀತ ಆಸ್ಥೆಯಿಟ್ಟು ಈ ವರದಿಯನ್ನು ಸಿದ್ದಪಡಿಸಲಾಗಿದೆ. ಕಳೆದ ಎರಡು ವರ್ಷದಿಂದ ನಿರಂತರವಾಗಿ ಈ ವಿಚಾರವನ್ನು ಸಂಸ್ಥೆಗೆ ಸಂಬಂಧಪಟ್ಟ ಬಿಳಿ ಶಾಲಿನವರ ಗಮನಕ್ಕೆ ತಂದರೂ ಆಡಳಿತ ಚುಕ್ಕಾಣಿ ಹಿಡಿದ ಅವರ ಅಸಹನೀಯ ಮೌನದಿಂದ ಅದನ್ನು ಸಮ್ಮತಿ ಎಂದು ತಿಳಿದ ಕಾಮುಕ ಬೀದಿ ಬೋರಿಯ ಹಾಗೇ ಮಾಡುತ್ತಿದ್ದಾನೆ. ಹೀಗಾಗಿ ಇನ್ನು ಸಹಿಸಲಸಾಧ್ಯ ಎಂಬ ನೆಲೆಯಲ್ಲಿ ಈ ವರದಿ. ಹೇಳಿ ಕೇಳಿ ಅದೊಂದು ದೇಶ ಭಕ್ತರ ತಂಡದ ಕಾಲೇಜ್. ಅದು ಇಲ್ಲಿ ಮಾತ್ರ ಅಲ್ಲ ಹತ್ತೂರಿಗೆ ಫೇಮಸ್. ಬಾವ-ಬಾಮೈದ, ಪುಣಚದ ರಂಗ ಕರ್ಮಿ ಅಣ್ತಮ್ಮ ಸೇರಿದಂತೆ ಹಲವರ ಶ್ರಮದಿಂದ ಉದ್ಭವಿಸಿದ ಆ ಕಾಲೇಜ್ ನಿಜಕ್ಕೂ ಇಲ್ಲಿನ ಹಿರಿಮೆಗೊಂದು ಗರಿ. ಹಿಂದೂ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನೈತಿಕತೆ ಹಾಗೂ ಸಂಸ್ಕಾರವನ್ನು ಕಲಿಸಬೇಕು ಎಂಬ ಉದಾತ್ತ ಚಿಂತನೆ ಮತ್ತು ಧ್ಯೇಯ ಇಟ್ಟುಕೊಂಡು ಕಾಲೇಜನ್ನು ಆರಂಭಿಸಲಾಗಿತ್ತು. ಕಳೆದೊಂದು ದಶಕದವರೆಗೆ ಅದೇ ಶಿಸ್ತು ಹಾಗೂ ವಿಚಾರವನ್ನು ಅದು ಮೈಗೂಡಿಸಿಕೊಂಡಿತ್ತು. ವಯೋ ಸಹಜವಾಗಿ ಅನಾರೋಗ್ಯಕ್ಕೆ ಬಾವ ತುತ್ತಾಗಿ ಉಸ್ತುವಾರಿ ಬಾಮೈದನ ಹೆಗಲೇರಿತು. ಅದಾದ ಬಳಿಕ ಪಾದ ಪೂಜೆ ಮಾಡುವವರೆಲ್ಲ ಒಂದೊಂದು ಸಾಮಂತರಸರಾದರು ನೋಡಿ. ಅಲ್ಲಿಂದ ಬಲಿಕದ್ದೆ ಹೊಸ ಅಧ್ಯಾಯ. ಇತ್ತೀಚಿಗಿನ ವಿದ್ಯಮಾನಗಳು ಅದು ನೈತಿಕವಾಗಿ ಹೇಗೆ ಅಧಃಪತನದತ್ತ ಸಾಗಿದೆ ಎಂಬುವುದಕ್ಕೆ ಸಾಕ್ಷಿ. ಸುಮಾರು
60ರ ದಶಕದಲ್ಲಿ ಊರಿನ ಜನರಿಂದ ಚಂದಾ ಎತ್ತಿ ಕಾಲೇಜ್ ಒಂದು ಆರಂಭವಾಯಿತು. ಊರಿನ ಚಂದಾ ಎತ್ತಿ ಸ್ಥಾಪನೆ ಆದದ್ದು ಮಾತ್ರ ಕ್ರಿಶ್ಚಿಯನ್ ಕಾಲೇಜು ಆಗಿತ್ತು. ಇಲ್ಲಿ ಹಿಂದೂ ಹೆಣ್ಮಕ್ಕಳಿಗೆ ಬಿಂದಿ, ಬಳೆ ಕಾಲುಂಗರ ಹಾಕಲು ಬಿಡುತ್ತಿಲ್ಲ ಎಂಬ ಕಾರಣಕ್ಕೆ ಉತ್ತರವಾಗಿ ಊರಿನ ಯಜಮಾನರಾಗಿದ್ದವರು ಮತ್ತೆ ಟೊಂಕ ಕಟ್ಟಿ ಈ ವಿದ್ಯಾಸಂಸ್ಥೆಯನ್ನು ಆರಂಭಿಸಲು ಮುನ್ನುಡಿ ಬರೆದರು. ಅವರ ಶ್ರಮಕ್ಕೆ ತಕ್ಕಂತೆ ಸಂಸ್ಥೆ ಬೆಳೆದು ಬಂತು ಅನ್ನಿ. ಆದರೇ ಇಂದು ಇಲ್ಲಿ ಮಹಿಳೆಯ ಬಿಂದಿ, ಬಳೆ ಕಾಲುಂಗರ ಜೊತೆಗೆ “ಎಲ್ಲವನ್ನೂ” ಬಿಚ್ಚಿಸುವ ಕಾರ್ಯ ಎಗ್ಗಿಲ್ಲದೇ, ಸಂಕೋಚ, ಮುಜುಗರವಿಲ್ಲದೇ ಸಂಸ್ಥೆಯ ಅಡಳಿತಾಧಿಕಾರಿಯೊಬ್ಬನಿಂದ ನಡೆಯುತ್ತಿದೆ. ಅದಕ್ಕಿಂತ ಘೋರ ಸಂಗತಿ ಏನೆಂದರೆ ಈ ವಿದ್ಯಾಸಂಸ್ಥೆಯ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಳಿ ಶಾಲಿನ 80 ದಾಟಿದ ತಾತಪ್ಪ ಈ ವಿಷಯ ತಮ್ಮ ಗಮನಕ್ಕೆ ಬಂದರೂ ಪರೋಕ್ಷವಾಗಿ ಆ ಆಡಳಿತಾಧಿಕಾರಿಯ ಬೆಂಬಲಕ್ಕೆ ನಿಂತಿರುವುದು ಸಂಸ್ಥೆಯ ಅಧಃಪತನಕ್ಕೆ ಪ್ರಮುಖ ಕಾರಣ.

ಈ ಬಿಳಿ ಶಾಲು ಹಿರಿಯರು ವಿದ್ಯಾಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಪ್ರಧಾನ ಪಾತ್ರ ವಹಿಸಿದವರು, ಒಂದು ರೀತಿಯಲ್ಲಿ ಅವರ ಕಲ್ಪನೆಯ ಕೂಸು ಈ ವಿದ್ಯಾಸಂಸ್ಥೆ. ಅವರು ಜಿಲ್ಲೆಯ ಮಟ್ಟಿಗೆ ಹಿಂದೂ ಹೃದಯ ಸಾಮ್ರಾಟ್. ಇಲ್ಲಿನ ಹಲವು ಹಿಂದೂ ಹುಲಿಗಳು ಅವರ ಗರಡಿಯಲ್ಲೆ ಪಳಗಿದವರು. ಅವರು ಭಾಷಣಕ್ಕೆ ನಿಂತರೆ ಸಂಸ್ಕೃತಿ, ಸಂಸ್ಕಾರ, ಧರ್ಮದ ಉಳಿವಿನ ಬಗ್ಗೆ ಮನ ಮುಟ್ಟುವಂತೆ, ಹಲವು ಬಾರಿ ಮನ ಕೆರಳುವಂತೆ ಮಾತನಾಡಬಲ್ಲರು. ಇಲ್ಲಿಂದ 25 ಕಿಮೀ ದೂರ ಪಡುವಣದತ್ತ ಚಲಿಸಿದರೆ ಎಲ್ಲರೂ ಪ್ರೌಡ್ ಪಡುವಂತಹ ಅವರೇ ಕಟ್ಟಿದ ಶಾಲೆಯಿದೆ. ಅದಕ್ಕೆ ಮಾರ್ಯಾದ ಪುರುಷೋತ್ತಮನ ಹೆಸರಿದೆ. ಅಲ್ಲಿ ಆಗಾಗ ಅವರು ಶಿಕ್ಷಕಿಯರಿಂದ ಮೈ ಕೈ ನೋವಿಗೆ ಮಸಾಜ್ ಪಡೆಯುತ್ತಾರೆ ಎಂಬ ಆರೋಪಗಳಿವೆಯಾದರೂ, ಆ ಹಿರಿ ಜೀವದ ಕೈ ಕಾಲು ಒತ್ತುವುದನ್ನು ತಪ್ಪು ಅಂತ ನಾವಾದರೂ ಯಾಕೇ ಹೇಳೋಣ ಅಲ್ವಾ ಪ್ರೆಂಡ್ಸ್.

ಈಗ ನೇರ ವಿಷಯಕ್ಕೆ ಬರೋಣ.
ಇಲ್ಲಿನ ಪದವಿ ಕಾಲೇಜಿಗೆ ಕೆಲವು ವರ್ಷಗಳ ಹಿಂದ ಥೇಟ್ ಸಿನಿಮಾ ಹೀರೋ ತರಹ ಮುಖಾರಂವಿದ ಹೊಂದಿರುವ, ಬಿಳಿ ಬಿಳಿಯಾಗಿ ಕಾಣೋ ವ್ಯಕ್ತಿಯೊಬ್ಬರು ಅಡಳಿತ ಸಮಿತಿಯಲ್ಲಿ ಕಾಣಿಸಕೊಳ್ಳುತ್ತಾರೆ. ಅದಕ್ಕೂ ಮೊದಲೆ ಅವರು ಬಿಳಿ ಅಂಗಿಗೆ ಕರಿ ಕೋಟ್ ಧರಿಸುತ್ತಿದ್ದರು. ಈಗ ಅಪರೂಪಕ್ಕೊಮ್ಮೆ ಧರಿಸುತ್ತಾರೆ. ಅವರು ವಿದ್ಯಾಸಂಸ್ಥೆಯ ಆಡಳಿತ ಮಂಡಳಿಗೆ ಸೇರಿದಾಗ, ಅವರ ಸಹೋದ್ಯೋಗಿಗಳೇ ಅವಾಕ್ಕಾಗಿದ್ದರು. ಎಲಾ ಇವನ ಕಥೆಯೇ!! ಅವನಿಗೆ ಹೇಗೆ ಸಿಕ್ತು ಇಷ್ಟು ದೊಡ್ಡ ಜವಬ್ದಾರಿ ಅಂತ. ಆದರೆ ಬಳಿಕದ ದಿನಗಳಲ್ಲಿ ಕಾಲೇಜಿನಿಂದ ಒಂದೊಂದೇ ಅಪಸವ್ಯಗಳು ಹೊರ ಬರಲು ಆರಂಭವಾಯಿತು. ಅದನ್ನು ನೋಡಿ ಅವಾಕ್ಕಾಗುವ ಸರದಿ ಇಡೀ ಊರಿನದ್ದಾಗಿತ್ತು.
ಈ ರಣ ಪೋಲಿ ಡೈರೆಕ್ಟರ್ ಗೆ ಕಾಲೇಜಿನ ಮಹಿಳಾ ಲೆಕ್ಚರ್ ಗಳೇ ಟಾರ್ಗೆಟ್. ಅವರ ವೀಕ್ ನೆಸ್, ಅವರಿಗಿರುವ ಕೆಲಸದ ಅನಿವಾರ್ಯತೆ, ಕೌಟುಂಬಿಕ ಸಮಸ್ಯೆಯ ಅಧ್ಯಯನ ಮಾಡುವ ಈತ ವೀಕ್ ಲಿಂಕ್ ಗಳ ನಂಬರ್ ಪಡೆದುಕೊಂಡು ತಡ ರಾತ್ರಿಯವರೆಗೆ ಚ್ಯಾಟ್ ಮಾಡಲು ಆರಂಭಿಸುತ್ತಾನೆ. ಇದು ಈ ಕಾಮುಕನ ಮೋಡಸ್ ಆಪ್ ಅಪರೆಂಡಿ. ಆರಂಭದಲ್ಲಿ ಇವನಿಗೆ ತಾರಾ ಬಲ ಕೂಡಿ ಬಂದಿದೆ. ಒಂದೆರಡು ಮಂದಿ ಇವನು ಎಸೆದ ಎಸೆತಕ್ಕೆ ಬೌಲ್ಡ್ ಆಗಿದ್ದಾರೆ. ಇದರಿಂದ ಆತ ಇನ್ನಷ್ಟು ಬಲಿತುಕೊಂಡಿದ್ದಾನೆ. ಆ ಬಳಿಕ ಆತ ಒಂದಷ್ಟು ಸ್ಪುರದ್ರೂಪಿ ಲೆಕ್ಷರ್ ಗಳ ಬೆನ್ನ ಹಿಂದೆ ಬಿದ್ದಿದ್ದಾನೆ. ಆದರೇ ಅವರು ಇವನಿಗೆ ಉಲ್ಟಾ ಹೊಡೆದಿದ್ದಾರೆ. ಆದರೂ ಅವನು ಕ್ಯಾರೇ ಎನ್ನುತ್ತಿಲ್ಲ. ಏಕೆಂದರೆ ಈ ಕಾಮುಕನಾ ಬೆನ್ನು ಕಾಯಲು ಆ ಬಿಳಿ ಶಾಲಿನ ಹಿರಿ ಜೀವ ನಿಂತಿದೆ.
ಈ ಕಾಮುಕ ಡೈರೆಕ್ಟರ್ ಕೆಲವು ಬಿಳಿಜಿರಳೆ ವಿದ್ಯಾರ್ಥಿನಿಯರಿಗೆ ಹೆಚ್ಚಿನ ಅಂಕವನ್ನೂ ಕೊಡಿಸುತ್ತಾನೆ. ಇದಕ್ಕೆ ಒಪ್ಪದವರಿಗೆ ಗೇಟಿನ ಒಳಗೆ ಬರಲೂ ಬಿಡುವುದಿಲ್ಲ ಎಂಬೆಲ್ಲಾ ದೂರುಗಳು ಕೇಳಿ ಬರುತ್ತಿದೆ. ಈತನ ಜೊಲ್ಲು ಬುದ್ದಿಯನ್ನು ಸಹಿಸಿಕೊಂಡೇ ಇರಬೇಕಾದ ಪರಿಸ್ಥಿತಿ ಕಾಲೇಜಿನ ಮಹಿಳಾ ಲೆಕ್ಚರ್ ಗಳದ್ದು.
ಒಮ್ಮೆ ಟೀಚರ್ ಒಬ್ರನ್ನು ನೋಡಿ ಖುಷಿಗೊಂಡು ಅವರ ಕುತ್ತಿಗೆ ಭಾಗದಲ್ಲಿನ ಮಚ್ಚೆ ಕಂಡು ತೇಟ್ ಸ್ಕಿನ್ ಡಾಕ್ಟರ್ ಶೈಲಿಯಲ್ಲಿ ನಿನ್ನ ದೇಹದಲ್ಲಿ ಇನ್ನು ಎಲ್ಲೆಲ್ಲಿ ಮಚ್ಚೆ ಇದೆ ಎಂದು ಕಾನೆಸ್ ಮಾರಿ ಮಾಡಲು ಹೊರಟಿದ್ದಾನೆ. ಆ ಲೆಕ್ಚರ್ ಜೀವನವಿಡಿ ಸಂಸ್ಕೃತಿ ಸಂಸ್ಕಾರದ ಪಾಠ ಕೇಳಿ ಅದರಂತೆ ಬದುಕಿದ ಗೃಹಿಣಿ. ದೇಶ ಭಕ್ತಿಯನ್ನು ತನ್ನ ಹೃದಯದಲ್ಲಿ ತುಂಬಿ ಈ ವಿದ್ಯಾಸಂಸ್ಥೆಗೆ ಬಂದಿದ್ದ ಆಕೆ ಇಲ್ಲಿನ ಕೊಚ್ಚೆ ಬುದ್ದಿ ಗೊತ್ತಿಲ್ಲದೆ, ಈ ಕಾಮುಕನಿಗೆ ಬುದ್ದಿ ಕಲಿಸಬೇಕೆಂದು, ಮನೆಯವರ ಜತೆಗೆ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಳಿ ಶಾಲಿನವರ ಬಳಿಗೆ ಆ ದೂಳು ಮುಕ್ಕುವ ರಸ್ತೆಯಲ್ಲಿ ಹೋಗಿದ್ದಾರೆ. ಎಲ್ಲಾ ವಿಚಾರವನ್ನು ವಿಸ್ತೃತವಾಗಿ ಹೇಳಿ ಚಡ್ಡಿ ಜಾರುವ ಕೃಷ್ಣನಿಗೆ ಸಂಸ್ಕಾರ ನೀಡಿ ಚಡ್ಡಿಗೆ ಒಂದು ಲಾಡಿ ವ್ಯವಸ್ಥೆ ನೀವೇ ಮಾಡಬೇಕೆಂದು ಕೈ ಮುಗಿದು ಕೇಳಿಕೊಂಡರು. ಆದ್ರೆ ಆ ಹಿರಿ ಜೀವ ಆತ ನಮ್ಮಲ್ಲಿನ ಮಹಾ ಮಚ್ಚೆ ತಜ್ಞ. ಆತನ ಜತೆಗೆ ಸಹಕಾರ ನೀಡಿದರೆ ಕ್ಯಾನ್ಸರ್ ಬರೋದಿಲ್ಲ ಎಂದು ಹೇಳಿದಾಗ ಇಡೀ ಕುಟುಂಬ ಕಕ್ಕಾಬಿಕ್ಕಿಯಾಗಿದೆ.

ಅಲ್ಲಿಂದ ವಾಪಸ್ಸು ಮನೆಗೆ ಬಂದವರು ಈ ದೇಶ ಭಕ್ತರ ಸಹವಾಸವೇ ಬೇಡ ಎಂದು ಕಾಲೇಜಿನ ಸಹವಾಸಕ್ಕೆ ಗುಡ್ ಬೈ ಹೇಳಿದ್ದಾರೆ. ಈ ಕೊಳಲು ವಾದಕ ಈಗೀಗ ಸದಾ ಕಾಲ ಪಲ್ಲಂಗದಲ್ಲೇ ಇರುತ್ತಾನೆಂಬ ಆರೋಪ ಜೋರಾಗುತ್ತಿದೆ. ಟೀಚರುಗಳು ತಮ್ಮ ವೈಯಕ್ತಿಕ ಕಾರಣಕ್ಕೆ ರಜೆ ಬೇಕು ಎಂದರೆ ಅದೇನು ಕಾರಣ ತೋರಿಸು ನಾನು ನೋಡಬೇಕು ಎಂದು ಹೇಳಿ ಬಿಡುವುದಾ?
ಒಮ್ಮೆ ಟೀಚರ್ ಒಬ್ಬರು ಹೆರಿಗೆ ರಜೆ ಕೇಳಲು ಹೋದಾಗ ಅಂತೂ ಹೆರಿಗೆ ಆಗೋ ಜಾಗ ತೋರಿಸು ಎಂದು ಹೇಳಿ ಆತನ ಸಂಸ್ಕೃತಿಯ ಅನಾವರಣ ಆಗಿ ಹೋಗಿದೆ. ರಜೆ ಬೇಕಾದರೆ ಇಂತಹ ಎಲ್ಲಾ ಸಂಗತಿಗಳಿಗೆ ಸ್ವಲ್ಪ ಸಹಾಯ ಮಾಡಬೇಕಾಗುತ್ತದೆ ಎಂಬುದು ಈಗ ಕೆಲವರ ನಿದ್ದೆ ಕೆಡಿಸಿದೆ. ಈತನಿಗೆ ರಾತ್ರಿ ನಿದ್ದೆ ಬರದೇ ಹೋದರೆ ನಿದ್ದೆ ಬರಿಸಲೂ ಸಹಾಯ ಮಾಡಬೇಕಾ ಅನ್ನುವ ಪ್ರಶ್ನೆ ಬಡಪಾಯಿ ಟೀಚರ್ ಗಳದ್ದು. ಮಾನಕ್ಕಂಜಿ ಯಾವುದನ್ನೂ ಹೊರಗೆ ಹೇಳದೇ ತಮ್ಮಲ್ಲೇ ಮರುಗುತ್ತಿರುವ ಟೀಚರ್ ಗಳಿಗೆ ಈ ಕಾಮ ಲೋಲನಿಂದ ಮುಕ್ತಿ ಬೇಕಾಗಿದೆ.

ಕೊನೆಯ ಮಾತು : ಈ ವರದಿ ಬಂದ ಬಳಿಕವಾದರೂ ಈ ಕಾಮುಕನ ಅಟ್ಟಹಾಸಕ್ಕೆ ಫುಲ್‌ ಸ್ಟಾಪ್‌ ಹಾಕಲು ದೇಶಭಕ್ತರ ವಿದ್ಯಾಸಂಸ್ಥೆ ವಿಫಲವಾದರೆ ಮಾನಗೇಡಿ ಡೈರೆಕ್ಟರ್‌ ಹಾಗೂ ಆ ವಿದ್ಯಾಸಂಸ್ಥೆಯ ಹೆಸರು ಮತ್ತು ಸಚಿತ್ರ ವರದಿ ಪ್ರಕಟಿಸಲು ಗಿಡಿಬೊಂಟೆ ಹಿಂದೇಟು ಹಾಕುವುದಿಲ್ಲ. ನಮ್ಮ ಬಳಿ screen Shot ನ ಭಂಡಾರವೇ ಇದೆ.

Leave a Comment