ಟಾಲಿವುಡ್‌’ನಿಂದ ಹೊಸ ಸುದ್ದಿ – ಅಜ್ಜನ ಹೆಣ ಕಣಿಯಲ್ಲಿ ತೇಲಿ ರೋಟರಿಪುರಕ್ಕೆ ಹೋಯಿತು ಎಂದು ಕಥೆ ಕಟ್ಟಿದ ಪಂಚಾಯತಿ ಕಟ್ಟೆಯ ಗೂರ್ಖ ಪಡೆಗೆ ಪುಷ್ಪಾ-3ಗೆ ಸ್ಕ್ರಿಪ್ಟ್‌ ಬರೆಯುವ ಹೊಸ ಜಾಬ್‌..!

ಹತ್ತೂರಿಗೆ ಪ್ರಸಿದ್ದಿ ಪಡೆದ ಪುತ್ತೂರಿಗೆ ಕಳೆದ ಕೆಲವು ವರ್ಷಗಳಿಂದ ಏನಾಗಿದೆ ಅಂತಾನೇ ಗೊತ್ತಾಗುತ್ತಿಲ್ಲ. ಒಂದು ಲಕ್ಷ ಚಿಲ್ಲರೆ ಹಣ ತೊಟ್ಟೆಯಲ್ಲಿ ಹಾಕಿಕೊಂಡು ಪೊರ್ತು ಕಂತಲು ಇನ್ನು ಗಂಟೆ ಬಾಕಿಯಿರುವಾಗ ಪುತ್ತೂರಿಗೆ ಬಂದ ಮುದುಕರೊಬ್ಬರು ಕಾಣೆಯಾಗುತ್ತಾರೆ. ಮರುದಿನ ಅವರ ಹೆಣ ಅಲ್ಲೆಲ್ಲೊ ರೋಟರಿಪುರದ ತೋಡಿನಲ್ಲಿ ಸಿಗುತ್ತದೆ. ಆ ಅಜ್ಜನಿಗೆ ಏನಾಯಿತು ? ಅವರು ಯಾಕೆ ಯಾರದೋ ಜಾಗದ ತೋಡಿನಲ್ಲಿ ಸಿಕ್ಕಿದ್ರು, ಅವರ ಕೈಯಲ್ಲಿದ್ದ ಹಣ ಏನಾಯಿತು ಅಂತಾ ಹುಡುಕಲು ಎಂಥ NIA ಬೇಕಾ ? ಅಲ್ಲ ಮನೆಯವರು ಮಲಯಾಳಿ ಜ್ಯೋತಿಷ್ಯ ಹತ್ರ ಕವಡೆ ಹಾಕಿಸ್ಬೇಕಾ ? ಪುತ್ತೂರಿನಲ್ಲೊಂದು ಗೂರ್ಖ ಪಡೆ ಉಂಟಾಲ್ವಾ ಅದಕ್ಕೆ ಏನಾಗಿದೆ!?

ಬೊಳುವಾರಿನಲ್ಲಿರುವ ಅಕ್ಕನ ಮನೆಗೆ ದುಡ್ಡು ತಕ್ಕೊಂಡು ಬಂದ ತಮ್ಮ 5 ಕಿಮೀ ದೂರದ ತೋಡಿನಲ್ಲಿ ಅರೆ ಬೆತ್ತಲಾಗಿ ಸಿಕ್ಕಿದ್ರೆ ಈ ಗೂರ್ಖ ಪಡೆ ಹೇಳೊದೇನು ಗೊತ್ತಾ? ಸರಿಯಾಗಿ ಒಂದು ಕೇರೆ ಹಾವು ಕೂಡ ಹೊಗಲು ಆಗದ ಕಣಿಯಲ್ಲಿ ಬಿದ್ರು…! ಅಲ್ಲಿಂದ ಆಗ ತಾನೇ ಸುರಿದ ಪಿರಿ ಪಿರಿ ಮಳೆಗೆ 5 ಕಿಮೀ ದೂರ ಬೊಳ್ಳಕ್ಕೆ ಹೋದ್ರು ಅಂತ..! ಆ ಅಜ್ಜ ಏನು ಬರುವಾಗ ದೋಣಿ ಹಿಡ್ಕೊಂಡು ಬಂದಿದ್ರಾ? ಅಂತಹ ಸಣ್ಣ ಬೊಳ್ಳಕೆ ಹೋಗಲು ಅವರೇನು ತೆಂಗಿನ ಕಾಯಿಯಾ? ಇವರು ಯಾರ ಕಿವಿಗೆ ಹೂವು ಇಡ್ತಾ ಇರೋದು …? ಪುತ್ತೂರಿನವರು ಅಂದ್ರೇನು ಅಷ್ಟು ಬೋಳಾಗಳ? ಬೋಳಾಗಳ ಅಂತಾ ಕೇಳ್ಬೇಕಾಗಿಲ್ಲ … ಥೇಟ್ ಬೋಳಾಗಳೇ… ಇಲ್ಲದೇ ಹೋದಲ್ಲಿ ಈ ಥರ್ಡ್ ಕ್ಲಾಸ್ ಗೂರ್ಖ ಪಡೆಯನ್ನು ಇಷ್ಟು ವರ್ಷ ಸಹಿಸಿಕೊಂಡು ಕೂತಿದ್ದಾರಲ್ಲ …. ಇತ್ತೀಚಿಗಿನ ಕೆಲವು ವರ್ಷಗಳಲ್ಲಿ ಹಡಬೆ ಪಡೆ ಒಂದಾದರೂ ಕೇಸ್ ಸರಿಯಾಗಿ ಹಿಡಿದಿದಾ ? ಕಟ್ಟೆಯಲ್ಲಿ ರಾಜಿ ಪಂಚಾತಿಕೆ ಮಾಡಿ ಲಕ್ಷ ಲಕ್ಷ ದೋಚಿದ್ದು ಬಿಟ್ರೆ , ಹೆಲ್ಮೆಟ್ ಇಲ್ಲದವರಿಗೆ, ಸೀಟ್ ಬೆಲ್ಟ್ ಹಾಕದವರಿಗೆ ಹುಡುಕಿ ಹುಡಕಿ ಕೇಸ್ ಹಾಕಿದ್ದು ಮಾತ್ರ. ಇವರ ದೋ ನಂಬರ್ ವೈವಾಟ್ ಗೊತ್ತಿರುವ ಕೆಲವು ಸಂಘಟನೆಗಳು ಪಂಚಾಯಿತಿ ಕಟ್ಟೆ ಮುಂದೆ ನಿಂತು ತಮ್ಮ ಬೇಳೆ ಬೇಯಿಸಿಕೊಳ್ಳಲು ಇಂತಹವರನ್ನು ಹಿಡಿಯದಿದ್ದರೇ ಪ್ರತಿಭಟನೆ ಮಾಡುತ್ತೇನೆ ಅಂತಾ ಹೇಳಿದ್ರೆ ವಾಟ್ಸ್ಯಾಪ್ ನಲ್ಲಿ ಗೀಚಿದವನನ್ನು, ಫೆಸ್ ಬುಕ್ ನಲ್ಲಿ ಬರೆದವನನ್ನು ಅಥವಾ ಪೇಪರ್ ಗೆ ಸ್ಟೇಟ್ ಮೆಂಟ್ ಕೊಟ್ಟವನನ್ನು ಹಿಡಿದು ಒಳಗೆ ಹಾಕ್ತಾರೆ . ಅವರನ್ನು ಹಾಗೇ ಹಿಡಿಯಬಹುದಾ ಬಾರ್ದಾ ಯಾವೂದು ಅವರಿಗೆ ಲಾಗೂ ಆಗೋದಿಲ್ಲ. ನೀವು ಹೇಳಿದ ಹಾಗೇ ಬೊಳುವಾರಿನ ಬ್ಯಾಂಕೊಂದರ ಮುಂಭಾಗ ಒಂದೂವರೆ ಫಿಟ್ ಅಗಲದ ಒಂದು ಫೀಟ್ ಆಳದ ಕಣಿಗೆ ಆ ಅಜ್ಜ ಕಾಲು ಜಾರಿ ಬಿದ್ದರೆಂದೇ ಇಟ್ಟುಕೊಳ್ಳುವ … ಅವರೇನು ಆ ಕಣಿಗೆ ಉದ್ದುದ್ದ ಡೈವ್ ಹೊಡೆದದ್ದ … ಡೈವ್ ಹೊಡೆದದ್ದೆ ಆದ್ರೂ ಅವರು ಕನಿಷ್ಟ ಒಂದು ವರ್ಷ ಪ್ರಾಕ್ಟಿಸ್ ಮಾಡಿರಬೇಕು… ಇಲ್ಲದೇ ಹೋದ್ರೆ ಆ ಒಂದೂ ವರೆ ಫೀಟ್ ಆಗಲದ ಕಣಿಯಲ್ಲಿ ಸರ್ತ ಬೀಳದ ಹೊರತು ಅವರು ಬೊಳ್ಳಕೆ ಹೋಗಲು ಹೇಗೆ ಸಾಧ್ಯ, ಕಾಲು ಜಾರಿ ಬಿದ್ರೆ ಅಡ್ಡಕ್ಕೆ ಬೀಳಬೇಕು ಅಲ್ವಾ ? ಸರಿ ಆ ಬೀಳುವ ವಿಡಿಯೋ ಸಿಸಿಟಿವಿಯಲ್ಲಿ ಉಂಟು ಅಂತಾ ಹೇಳುವ ನೀವು ಅದನ್ನು ಯಾರಿಗೂ ತೋರಿಸುತ್ತಿಲ್ಲ …? ಅದೆಂತ ಕೊಹಿನೂರು ವಜ್ರವಾ? ಅವರ ಮೈಮೇಲಿದ್ದ ಟೀ ಶರ್ಟ್ ಮಾಯವಾಯ್ತಾ ? ಅದರ ಒಂದು ಸಣ್ಣ ತುಣುಕು ಕೂಡ ಯಾಕೇ ಸಿಕ್ಕಿಲ್ಲ ? ಮೈಮೇಲಿದ್ದ ಟೀ ಶರ್ಟ್ ಕಳಚಿ ಹೋದರೂ ,ದೇಹದ ಮೇಲೆ ಗೀರು ಗಾಯಗಳಾಗಿಲ್ಲ ಅಂದ್ರೆ ಅವರನ್ನು ಎಂತ ಅಂಗಿ, ದೋತಿ ತೆಗೆದು ಪೆಟ್ಟಿಗೆಯಲ್ಲಿ ಕುಂತಿ ಕರ್ಣನನ್ನು ತೇಲಿ ಬಿಟ್ಟ ಹಾಗೇ ಬಿಟ್ಟದ್ದ? ಆಯ್ತು ಅವರು ಅಲ್ಲೆ ಬಿದ್ರು ಅಂತಿಟ್ಟುಕೊಳ್ಳೋಣ, ಕೈಯಲ್ಲಿದ್ದ ಹಣ ಎಲ್ಲಿ ಹೋಯಿತು ? ಅದು ಸಿಸಿಟಿವಿಯಲ್ಲಿ ಕಾಣಿಸೋಲ್ವಾ ? ಎಲ್ಲ ನೋಟು ನೀರಲ್ಲಿ ಕೊಚ್ಚಿ ಹೋಯಿತಾ? ಕೆಲವು ನೋಟುಗಳಾದ್ರು ಸಿಗಬೇಕು ಅಲ್ವಾ? ಇನ್ನು ಮಂಜಲ್ಪಡ್ಫುನಲ್ಲಿ ಕೂತಿರುವ ದೊಡ್ಡ ಸಾಹೇಬ್ರು ಮಧ್ಯಾಹ್ನದ ಮೇಲೆ ಫುಲ್ ಟೈಟ್ ಅಂತಾ ಎಲ್ಲರಿಗೂ ಗೊತ್ತಿರುವ ಸತ್ಯ . ಆ ಮನುಷ್ಯನಿಗೆ ಅಜ್ಜ ದುಡ್ಡು ಹಿಡ್ಕೊಂಡು ಬಂದ್ರಿದ್ರು ಅಂತಾ ಗೊತ್ತಾಗಿದೆ ಅಜ್ನ ಬೂದಿಒಪ್ಪ ನಡೆದ ದಿನ ಸಂಜೆ ಅಜ್ಜನನ್ನು ಕಳಕೊಂಡ ಫ್ಯಾಮಿಲಿ ಕೊಂದವನನ್ನು ಬಂಧಿಸಿ ಅಂತಾ ರಚ್ಚೆ ಹಿಡಿಯುತ್ತಿದ್ರೆ ಈ ಪುಣ್ಯಾತ್ಮ ಮಕ್ಕಳ ಮೇಲೆ ದೇವರ ಮೇಲೆ ಪ್ರಮಾಣ ಮಾಡಿ ಕೈಕಾಲು ಹಿಡಿಯಲು ಹೋಗುತಿತ್ತು . ಯಾವ ಗ್ರಹಚಾರಕ್ಕೆ ಆ ಜನ ಪುತ್ತೂರಿಗೆ ಬಂದು ವಕ್ಕರಿಸಿತೋ!? ಆ ಬಳಿಕ ಒಂದೇ ಒಂದು ಕೇಸ್ ಸರಿಯಾಗಿ ಸಾಲ್ವ್ ಆಗಿಲ್ಲ.. ಈ ಇಡಿ ಪ್ರಕರಣದಿಂದ ಲಾಭ ಆಗಿದ್ದು, ತಂಡದ ಕಲಾವಿದನಿಗೆ . ಉಬಾರ್ ನ ನೇತ್ರಾವತಿ ನದಿಯಲ್ಲಿ ಪಿಂಡ ಬಿಡಲು ನೀರಿಲ್ಲದ ಸಮಯದಲ್ಲಿ ಬೊಳುವಾರಿನಿಂದ ಹೆಣವೊಂದು ಉಜಿರ್ ಕಣಿ ಸೈಜಿನ ಕಣಿಯಲ್ಲಿ ಹೆಣವೊಂದು ತೇಲಾಡಿ ರೋಟರಿಪುರದವರೆಗೆ ಹೋಗುತ್ತದೆ ಎಂದು ಕಥೆ ಕಟ್ಟಿದ ಆ ಅಸಾಮಿಗೆ ಪುಷ್ಪಾ -3 ಗೆ ಸ್ಕ್ರಿಪ್ಟ್ ಬರೆಯುವ ಕೆಲಸ ಸಿಕ್ಕಿದೆ ಅಂತಾ ಸುದ್ದಿ ಟಾಲಿವುಡ್ ನಿಂದ ಬಂದಿದೆ..!

Leave a Comment