ಚೀನನೆಂಬ ಗೋಮುಖ ವ್ಯಾಘ್ರ ಎಲ್ಲರನ್ನು ಖೆಡ್ಡಾಕ್ಕೆ ಕೆಡವಿದ ರೋಚಕ ಕಥೆ! ಲೇಖನಿಕಾರರು ಮುಕ್ಕೇಲನ ಜತೆಗೆ ನಿಲ್ಲುವರೇ?

ಸತ್ಯದ ಹಾದಿಯಲ್ಲಿ ನಡೆಯಬೇಕಾದವರು, ಸಮಾಜಕ್ಕೆ ಕನ್ನಡಿ ಹಿಡಿಯಬೇಕಾದವರು – ಆದರೆ ಅವರೇ ಕತ್ತಲ ಲೋಕದ ಸೂತ್ರಧಾರರಾದರೆ? ಲೇಖನಿಕಾರರ ಪಾವಿತ್ರ್ಯತೆಗೆ ಮಸಿ ಬಳಿದು, ಸಾರ್ವಜನಿಕ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡ ಒಂದು ಆಘಾತಕಾರಿ ಪ್ರಕರಣವಿದು. ‘ಚೀನಪ್ಪ’ ಎಂಬ ಹೆಸರಿನ ಹಿಂದೆ ಅಡಗಿದ ಭ್ರಷ್ಟಾಚಾರದ ಸಾಮ್ರಾಜ್ಯದ ಅನಾವರಣ.
ಸಮಾಜದ ಕಣ್ಣು, ಕಿವಿ ಎಂದು ಕರೆಸಿಕೊಳ್ಳುವ ಲೇಖನಿಕಾರರ ವಲಯದಲ್ಲೇ ಈಗ ಆಘಾತಕಾರಿ ಸತ್ಯಗಳು ಹೊರಬೀಳುತ್ತಿವೆ. ‘ಕಾರ್ಯನಿರತ ಸಂಘ’ದ ಅಧ್ಯಕ್ಷ ಚೀನಪ್ಪನ ವಸೂಲಿ ಸಾಮ್ರಾಜ್ಯದ ಬಗ್ಗೆ ನಾವು ಕಳೆದ ಬಾರಿ ಬೆಳಕು ಚೆಲ್ಲಿದ್ದೆವು. ಆದರೆ ಈಗ ಲಭ್ಯವಾಗಿರುವ ಮಾಹಿತಿಗಳು, ಇದೊಂದು ಹಿಮಗಡ್ಡೆಯ ಸಣ್ಣ ತುದಿ ಮಾತ್ರ ಎನ್ನುವುದನ್ನು ಸಾರಿ ಹೇಳುತ್ತಿವೆ. ಈ ‘ಗೋಮುಖ ವ್ಯಾಘ್ರ’ ಕೇವಲ ಲೇಖನಿಕಾರರನ್ನು ಮಾತ್ರವಲ್ಲ, ರಾಜ್ಯದ ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನೂ ತನ್ನ ಕೆಡ್ಡಕ್ಕೆ ಬೀಳಿಸಿದ್ದಾನೆ!

ದೀಪದಡಿ ಯಾವತ್ತೂ ಕತ್ತಲು ಎಂಬ ಗಾದೆ ಮಾತಿಗೆ ಅಕ್ಷರಶಃ ಜೀವ ತುಂಬಿದೆ ಈ ಪ್ರಕರಣ. ತಮಗೆ ಎಲ್ಲವೂ ಗೊತ್ತಾಗುತ್ತದೆ, ಸಮಾಜದ ಎಲ್ಲ ವಿಷಯಗಳಿಗೆ ತಾವೇ ಕಣ್ಣು ಕಿವಿ ಎಂದು ಎದೆಯುಬ್ಬಿಸುವ ಲೇಖನಿಕಾರರಿಗೆ ತಮ್ಮದೇ ಸಂಘದಲ್ಲಿ ನುಗ್ಗಿರುವ ಹೆಗ್ಗಣದ ಬಗ್ಗೆ ಗೊತ್ತೇ ಇಲ್ಲ. ಎಲ್ಲೋ ಒಬ್ಬ ಸಂಚಾರಿ ಗೂರ್ಖಾ 500 ರೂ. ಲಂಚ ತೆಗೆದುಕೊಂಡರೆ ಬಾಕ್ಸ್ ಐಟಮ್ ನ್ಯೂಸ್ ಮಾಡಿ, ‘ಲಂಚಾವತಾರವನ್ನು ಬ್ರೇಕ್ ಮಾಡಿದೆ’ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವ ಲೇಖನಿಕಾರರಿಗೆ, ತಮ್ಮದೇ ಸಂಘದಲ್ಲಿ ಲಕ್ಷ ಲಕ್ಷ ನುಂಗುತ್ತಿರುವುದು ಗೊತ್ತಾಗಿಲ್ಲ ಎಂದರೆ ಇದು ನಂಬುವಂತಹ ವಿಚಾರವೇ? ಅದು ಸಹ ನಿರಂತರ 6 ವರ್ಷಗಳ ಕಾಲ…
ಚೀನಪ್ಪ ಎಂಬಾತ ತನ್ನ ಅಧಿಕಾರವನ್ನು ಹೇಗೆ ವೈಯಕ್ತಿಕ ಲಾಭಕ್ಕಾಗಿ ದುರುಪಯೋಗಪಡಿಸಿಕೊಂಡಿದ್ದಾನೆ ಎಂಬುದು ಸಂಘದ ಸದಸ್ಯರಿಗೇ ಗೊತ್ತಾದರೆ ಬೆಚ್ಚಿಬೀಳುತ್ತಾರೆ. ಲಕ್ಷ ಲಕ್ಷ ಲೂಟಿ ಮಾಡುತ್ತಿದ್ದರೂ, ಲೇಖನಿಕಾರರಿಗೆ ತಮ್ಮದೇ ಸಂಘದಲ್ಲಿ ನಡೆಯುತ್ತಿದ್ದ ಈ ಸುಲಿಗೆಯ ಬಗ್ಗೆ ವಾಸನೆಯೂ ಬಾರದಿದ್ದುದು ವಿಪರ್ಯಾಸ! ಇವರು ಹೊಟ್ಟೆಗೆ ಅನ್ನ ತಿನ್ನುತ್ತಿದ್ದಾರೋ ಅಥವಾ ಬೂಸಾ ತಿನ್ನುತ್ತಿದ್ದಾರೋ ಎಂಬ ಪ್ರಶ್ನೆ ಕಾಡುತ್ತಿದೆ.
ಆರು ವರ್ಷಗಳ ಹಿಂದೆ, ಚೀನಪ್ಪ ಮತ್ತು ತಂಡ ಮೊದಲ ಬಾರಿಗೆ ಚುನಾವಣೆಗೆ ನಿಂತಾಗ, ನಲವತ್ತಕ್ಕೂ ಹೆಚ್ಚು ಲೇಖನಿಕಾರರಿಗೆ ನಿವೇಶನ ಕೊಡಿಸುವ ಭರವಸೆ ನೀಡಿದ್ದ. ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ಗೃಹ ನಿರ್ಮಾಣ ಸಂಘವನ್ನೂ ಸ್ಥಾಪಿಸಿದ. ನಿವೇಶನಕ್ಕಾಗಿ “ಮುಮ”ರಿಗೆ ಮನವಿ ಪತ್ರವನ್ನೂ ಸಲ್ಲಿಸಿದರು. ಮುಗ್ಧ ಲೇಖನಿಕಾರರು, ತಮ್ಮ ನಿವೇಶನಕ್ಕಾಗಿ ಚೀನಪ್ಪ ಹೋರಾಡುತ್ತಿದ್ದಾನೆ ಎಂದು ನಂಬಿದ್ದರು. ಆದರೆ, ನಿಜವಾಗಿಯೂ ತೆರೆಮರೆಯಲ್ಲಿ ನಡೆಯುತ್ತಿದ್ದ ಷಡ್ಯಂತ್ರವೇ ಬೇರೆ.
ಆರು ವರ್ಷ ಆಡಳಿತ ನಡೆಸಿದರೂ, ಒಬ್ಬೇ ಒಬ್ಬ ಲೇಖನಿಕಾರನಿಗೆ ಒಂದು ತುಂಡು ಜಾಗ ಕೊಡಿಸದ ಚೀನಪ್ಪ, ತನ್ನ ಅಧಿಕಾರವನ್ನು ಬಳಸಿ ತನ್ನ ಸ್ವಂತಕ್ಕೆ ಜಾಗ ಮಾಡಿಕೊಂಡಿದ್ದಾನೆ. ಮುಮ ಮಂಗಳೂರಿಗೆ ಬಂದಗೆಲ್ಲಾ ವೇದಿಕೆಗೆ ಹಾಜರಾಗಿ ಮನವಿ ನೀಡುತ್ತಿದ್ದ ಚೀನಪ್ಪನ ಅಸಲಿ ಉದ್ದೇಶ ಈಗ ಬಯಲಾಗಿದೆ. ಮುಮ ಕಚೇರಿಯ ಮೂಲಗಳಿಂದ ಹೊರಬಿದ್ದ ಸತ್ಯವೇನೆಂದರೆ, ಚೀನಪ್ಪ ಮನವಿ ನೀಡುತ್ತಿದ್ದದ್ದು ಸಂಘದ ಸದಸ್ಯರ ನಿವೇಶನಕ್ಕಾಗಿ ಅಲ್ಲ, ತನ್ನ ಕುಟುಂಬ ಸದಸ್ಯರೊಬ್ಬರಿಗೆ ‘ಸ್ವರ, ತಾಳ ಕಲಾ ಶಾಲೆ’ಯ ನಿರ್ಮಾಣಕ್ಕಾಗಿ ಜಾಗ ನೀಡಬೇಕೆಂದು ಬೇಡಿಕೆ ಇಡುತ್ತಿದ್ದ! ಇದು ಸಮಾಜ ಸೇವೆ ಹೆಸರಿನಲ್ಲಿ ನಡೆದ ವೈಯಕ್ತಿಕ ಲಾಭದ ಸ್ಪಷ್ಟ ನಿದರ್ಶನ!
ಮೊನ್ನೆ ಮೊನ್ನೆ ಮುಮ ನಮ್ಮೂರಿನ ಕ್ರೀಡಾಕೂಟ ಉದ್ಘಾಟನೆಗೆ ಆಗಮಿಸಿದಾಗ ಮನವಿ ನೀಡಿದ್ದು, ಇದನ್ನು ಸಾಮಾಜಿಕ ಜಾಲತಾಣದಲ್ಲಿ ಚೀನ ಹಾಕಿಕೊಂಡಿದ್ದ. ಆದರೆ ಈ ಮನವಿಯೂ ಚೀನಪ್ಪ ತನ್ನ ಸ್ವಂತ ಉದ್ದೇಶಕ್ಕೆ ನೀಡಿದ್ದೆಂದು “ಕೈ”ಪತ್ ಮುಖಂಡರೇ ಹೇಳಿದ್ದು ಈ ಚೀನನ ಕಿತಾಪತಿಗೆ ಕನ್ನಡಿ ಹಿಡಿದಂತಾಗಿದೆ..!!

ಇಷ್ಟೇ ಅಲ್ಲ, ಮುಂಬರುವ ಕಾರ್ಯನಿರತ ಸಂಘದ ಚುನಾವಣೆಯಲ್ಲಿ, ಚೀನಪ್ಪ ಮತ್ತು ತಂಡ ತಾಲೂಕು ತಾಲೂಕುಗಳಿಂದ ಮತದಾರರನ್ನು ಕರೆತರಲು ವಾಹನ ವ್ಯವಸ್ಥೆ ಮಾಡಿದೆ. ಚುನಾವಣಾ ನೀತಿ ಸಂಹಿತೆಗೆ ವಿರುದ್ಧವಾದ ಈ ನಡೆಯನ್ನು ಯಾರೂ ಪ್ರಶ್ನಿಸುತ್ತಿಲ್ಲವೇಕೆ? ಮತದಾರರಿಗೆ ಮಧ್ಯಾಹ್ನ ಊಟ ತಿಂಡಿ ವ್ಯವಸ್ಥೆ ಮಾಡುವುದಾಗಿಯೂ ಭರವಸೆ ನೀಡಲಾಗಿದೆಯಂತೆ. ಈ ತಂಡ, ಈಗ ಊಟದ ಪ್ಯಾಕೆಟ್ಗಳ ಮೂಲಕವೂ ಮತದಾರರನ್ನು ಸೆಳೆಯಲು ಯತ್ನಿಸುತ್ತಿದೆ. ಈ ‘ತಿಂಡಿ’ಯನ್ನು ಮುಕ್ಕುವ ಲೇಖನಿಕಾರರು ಸಮಾಜದಲ್ಲಿ ಇನ್ನೆಷ್ಟು ಮುಕ್ಕುತ್ತಾರೋ ಎಂಬ ಪ್ರಶ್ನೆ ಕಾಡುತ್ತಿದೆ.
ಈ ಬಸ್ಸು ಹಾಗೂ ಊಟದ ವ್ಯವಸ್ಥೆಯ ಹೆಸರಿನಲ್ಲಿ ಚೀನಪ್ಪ ಅಂಡ್ ಟೀಮ್ ವಿವಿಧ ಕಡೆ ಹಣ ದೋಚಿದ್ದನ್ನು ಈ ಹಿಂದಿನ ವರದಿಯಲ್ಲಿ ವಿವರವಾಗಿ ಬರೆದಿದ್ದೇವೆ. ಇದು ಕೋತಿ ಬೆಣ್ಣೆ ತಿಂದು ಮೇಕೆ ಮೂತಿಗೆ ಒರೆಸಿದಂತೆ. ಚುನಾವಣೆ ನೆಪದಲ್ಲಿ ಹಲವು ಲಕ್ಷ ದೋಚಿರುವ ಚೀನಪ್ಪ ಅಂಡ್ ಟೀಮ್, ಕೆಲವು ಸಾವಿರ ಚಿಲ್ಲರೆ ರೂಪಾಯಿಗಳನ್ನು ಗ್ರಾಮೀಣ ಭಾಗದ ಲೇಖನಿಕಾರರೆಂಬ ಮುಗ್ಧ ಮೇಕೆಗಳ ಮೂತಿಗೆ ಮೆತ್ತಲಿದೆ. ಪಾಪ ಮೇಕೆಗಳು!!!
ಒಟ್ಟಿನಲ್ಲಿ ಸಮಾಜವನ್ನು ತಿದ್ದಬೇಕಾದ, ಭ್ರಷ್ಟರನ್ನು ದಮನಿಸಬೇಕಾದ ಲೇಖನಿಕಾರರೇ ಪರಮ ಭ್ರಷ್ಟರಾಗಿ ಸಮಾಜವನ್ನು ಮುಕ್ಕುತ್ತಿರುವುದು ಅಪಾಯದ ಸೂಚನೆಯಾಗಿದೆ.

‘ಗಿಡಿ’ ಈಗ ಬೋಂಟೆಗೆ ಇಳಿದಿದೆ, ಇನ್ನಷ್ಟು ಭಯಾನಕ ಸತ್ಯಗಳನ್ನು ಹೊರಗೆಡವಲು ಸಿದ್ಧವಾಗಿದೆ. ಚೀನಪ್ಪನ ಈ ಸುಲಿಗೆ ಸಾಮ್ರಾಜ್ಯದ ಸಂಪೂರ್ಣ ಚಿತ್ರಣವನ್ನು ಒಂದೊಂದಾಗಿ ನಿಮ್ಮ ಮುಂದಿಡುತ್ತೇವೆ.

Leave a Comment