ಪುತ್ತೂರಿನ ವೇಷ್ಟಿಯ ಪುತ್ರ ಕಾಮೇಷ್ಟಿ ಏಕಾದ..!?! ಅಪ್ಪ ರಸಿಕ – ಮಗ ಬೆವಕೂಫ!

ಕೇಳಿರಣ್ಣಾ ಕೇಳಿ! ಮುತ್ತೂರಿನಲ್ಲಿ ಕಮಲ ‘ಕಲಿ’ಗಳ ಕಾಮಕೇಳಿಗಳ ಕಥೆಗಳು ಬಾಯಿಂದ ಬಾಯಿಗೆ ಹರಿದಾಡುವುದು ಹೊಸದೇನಲ್ಲ. ಆದರೆ, ಈಗ ಒಂದು ಹೊಸ ಅಧ್ಯಾಯ ತೆರೆದುಕೊಂಡಿದೆ! ಈ ಪ್ರಕರಣದ ಬಳಿಕವಂತೂ, “ಅಯ್ಯಯ್ಯೋ, ಇದೆಂತಾ ವಂಶಪಾರಂಪರ್ಯವಾಗಿ ಬಂದಿರೋ ‘ಬಂಪರ್’ ಬಳುವಳಿಯಪ್ಪಾ?” ಅಂತ ಹತ್ತೂರಿನ ಜನ ಲೊಚಗುಟ್ಟಿಕೊಂಡು, ವಾಟ್ಸಪ್ ಸ್ಟೇಟಸ್ ಹಾಕಿಕೊಳ್ಳುವಷ್ಟು ನಮ್ಮ ‘ಕಮಲ’ ವೀರನ ಸುಪುತ್ರ ಆಡಿದ ‘ಮನ್ಮಥ’ ಪುರಾಣ ಫೇಮಸ್ ಆಗಿದೆ!
ಪಂಚಾಯಿತಿ ಕಟ್ಟೆ ಏರಿದ ‘ಹಸಿಬಿಸಿ’ ಪ್ರೇಮಪುರಾಣ!
ಮೊನ್ನೆ ಮೊನ್ನೆ ನಡೆದ ಒಂದು ಘಟನೆ ಪುತ್ತೂರಿನ ಪಡ್ಡೆ ಹೈಕಳ ನಿದ್ದೆಗೆ ಕನ್ನ ಹಾಕಿದೆ. ಅವರ ಪಾಲಿಗೆ ಈಗ ಇದೇ ‘ಬ್ರೇಕಿಂಗ್ ನ್ಯೂಸ್’, ಹಾಟ್ ಟಾಪಿಕ್, ಟ್ರೆಂಡಿಂಗ್ ರೀಲ್ಸ್ ಎಲ್ಲವೂ! ಹದಿಹರೆಯದ ಹುಡುಗ-ಹುಡುಗಿಯರ ಲವ್ವು, ಡವ್ವು, ಆಮೇಲೆ ‘ಸಣ್ಣ ಹೊಟ್ಟೆ’ ದೊಡ್ಡದಾದ ಕಥೆಯಿದು. ಇಲ್ಲಿನ ‘ವಿಶ್ವವಿಖ್ಯಾತ’ ಪಂಚಾಯಿತಿ ಕಟ್ಟೆಯ ಮೆಟ್ಟಿಲೇರಿ, ಈ ಕಥೆ ಇಡೀ ಊರಿಗೆ ಢಂ ಢಂ ಅಂತ ಡಂಗೂರ ಸಾರಿದೆ.. ಮದುವೆ ವಯಸ್ಸಿಗೆ ಕಾಲಿಡುವ ಮುನ್ನವೇ ಹುಡುಗ ‘ಅಪ್ಪ’ನಾಗುವ ಆತುರದಲ್ಲಿದ್ದರೆ, ಆ ಯುವತಿ ಮದುವೆಗೂ ಮುನ್ನವೇ ತಾಯಿಯಾಗುವ ಧೈರ್ಯ ತೋರಿದ್ದಾಳೆ. ಎಂಟು ತಿಂಗಳ ತುಂಬು ಗರ್ಭವನ್ನು ಯಾರಿಗೂ ಗುಟ್ಟು ರಟ್ಟು ಮಾಡದೆ, ‘ನಿಂಜಾ ಟೆಕ್ನಿಕ್’ ನಿಂದ ಕಾಪಾಡಿಕೊಂಡು ಬಂದ ಆಕೆ, ಈಗ ಎಲ್ಲರ ಮುಂದೆ “ಸರ್ಪ್ರೈಸ್!” ಅಂತ ನಿಂತಿದ್ದಾಳೆ! ಈ ಸರ್ಪ್ರೈಸ್ ನೋಡಿ ಯುವಕನ ತಂದೆಯ (ವೇಸ್ಟಿಯ) ಹೃದಯ ‘ಢಮಾರ್’ ಆಗೋದು ಒಂದು ಬಾಕಿ ಇತ್ತು ಅಷ್ಟೇ!
ಚೆಂಡೆ ಕುಟ್ಟುವ ಕೈಯಲ್ಲಿ ವಾಸ್ತುಶಾಸ್ತ್ರ!
ಚೆಂಡೆ ಕುಟ್ಟುವ ಫ್ಯಾಮಿಲಿಯಿಂದ ಬಂದ ಈತನ ತಂದೆ, ಈಗ ಸಾಕ್ಷಾತ್ ದೇವರಿಗೇ ವಾಸ್ತು ಹೇಳಿಕೊಡೋ ರೇಂಜಿಗೆ ‘ಬಿಲ್ಡಪ್’ ಕೊಡ್ತಿದ್ದಾರೆ; ಅಥವಾ ಹಾಗೆ ‘ಸೀನ್’ ಕ್ರಿಯೇಟ್ ಮಾಡೋದ್ರಲ್ಲಿ ಪಕ್ಕಾ ‘ಆಸ್ಕರ್ ವಿನ್ನರ್’ ಆಗಿದ್ದಾರೆ! ಸೀಮಾಧಿಪತಿಯ ದೇವಸ್ಥಾನದ ಆರೂಢ ನಿರ್ಮಾಣ ಇವರ ವಾಸ್ತು ಪ್ರಕಾರವೇ ಆಯ್ತು ಅಂತ ಪೇಪರಲ್ಲಿ ಯಾವಾಗ ಬಂತೋ, ಆಮೇಲೆ ಇವರು ಮುಟ್ಟಿದ್ದೆಲ್ಲ ಬಂಗಾರ… ಆ ಪೇಪರ್ ಕಟಿಂಗ್ ಅನ್ನೇ ಯಾವುದೋ ‘ಹಾರ್ವರ್ಡ್ ಯೂನಿವರ್ಸಿಟಿ’ ಕೊಟ್ಟ ಡಾಕ್ಟರೇಟ್ ಸರ್ಟಿಫಿಕೇಟ್ ತರಹ ಫ್ರೇಮ್ ಹಾಕಿಸಿ, ಹತ್ತೂರಿನ ಮಂದಿಗೆ ‘ಟೋಪಿ’ ಹಾಕಿ, ‘ಧಂಡಿ’ಯಾಗಿ ದುಡಿಯುತ್ತಿದ್ದಾರೆ. ಆದರೆ, ವಿಪರ್ಯಾಸ ನೋಡಿ, ಮಗನ ‘ಮಂಚದಾಟ’ದಿಂದ ಈ ‘ವಾಸ್ತು ಪುರುಷ’ನ ಮನೆಯ ವಾಸ್ತುವೇ ಅಸ್ತವ್ಯಸ್ತವಾಗಿದೆ
ಈ ಯುವಕನ ಅಪ್ಪನೋ ಕಲಾ ಕೋವಿದ. ಒಂದು ಕಡೆ ಫುಲ್ ಕಾನ್ಸಂಟ್ರೇಶನ್ನಿಂದ ವಾಸ್ತು ಪುಸ್ತಕ ಓದೋದು, ಇನ್ನೊಂದು ಕಡೆ ಅಷ್ಟೇ ‘ಡೆಡಿಕೇಷನ್’ನಿಂದ ಸಂಪರ್ಕಕ್ಕೆ ಬಂದ ‘ಆಂಟಿ’ಯರ ಬೆಡ್ರೂಮ್ ಅಸ್ತವ್ಯಸ್ತ “ಮಾಡೋದು” ! ಯಕ್ಷಗಾನದಲ್ಲಿ ಚೆಂಡೆ ಬಡಿದು ಸ್ತ್ರೀ ಪಾತ್ರಗಳನ್ನು ಕುಣಿಸುವ ಈತ ಅಷ್ಟೇ ಸೊಗಸಾಗಿ, ಅಥವಾ ಅದಕ್ಕಿಂತಲೂ ಒಂದು ಕೈ ಹೆಚ್ಚಾಗಿಯೇ ಪಲ್ಲಂಗದಲ್ಲಿ ಸ್ತ್ರೀಯರನ್ನು ಕುಣಿಸುವ ‘ಸಿದ್ಧಿ’ ಪಡೆದಿದ್ದ. ಇದಕ್ಕೆ ಲೇಟೆಸ್ಟ್ ಎಕ್ಸಾಂಪಲ್ ಅಂದ್ರೆ, ಹೋದ ಕಮಿಟಿಯಲ್ಲಿದ್ದ ‘ವೀಣೆ’ಯನ್ನು (ಹೆಸರು ಮಾತ್ರ ವೀಣೆ, ನುಡಿಸಿದ್ದು ಬೇರೆ ರಾಗ!) ನುಡಿಸಿ, ಅದರಿಂದ ‘ಅಪರೂಪದ’ ರಾಗಗಳನ್ನು ಹೊರಡಿಸಿದ್ದು. ಅದು ಇಡೀ ಪುತ್ತೂರಿಗೆ ಗೊತ್ತಿದ್ದ ‘ಸೀಕ್ರೆಟ್ ಗುಟ್ಟು’! ಇನ್ನು ಪುತ್ತೂರಿನ ಚತುರ್ಮುಖ ರಸ್ತೆಯಲ್ಲಿ ‘ದೀಕ್ಷಾ’ಬದ್ದನಾಗಿ ಆಡಿದ ಸರಸ ಸಲ್ಲಾಪ ʼಜಗ್ಗʼದ್ ವಿಖ್ಯಾತ. ಸ್ವ-ಪಕ್ಷದಲ್ಲಿ ಇವನ ಕಾಮ ವಾಸನೆ ಬಂದರೂ, ವಾಸನೆ ಬರದಂತೆ ನಟಿಸುತ್ತಿದ್ದಾರೆ.
ಅಲ್ಲಿಗೆ, ತಂದೆ ಮಗ ಇಬ್ಬರೂ ‘ಮೂಲಪುರುಷರ’ ವಂಶದ ಹೆಜ್ಜೆ ಗುರುತಿನಲ್ಲೇ ಸಾಗಿದ್ದರೂ, ಮಗ ಮಾತ್ರ ಈಗ ಸಾರ್ವಜನಿಕವಾಗಿ ಬೆತ್ತಲಾಗಿದ್ದಾನೆ.

ಕಾಮದಾಟಕ್ಕೆ ನಿಂತ ಬಸಿರು, ‘ಚೆಂಡೆ’ ತಲೆಗೆ ಚಂಡಮಾರುತ!

ಅಬ್ಬಬ್ಬಾ! ಮಕ್ಕಳಿಲ್ಲದೆ ಸಾವಿರಾರು ಹರಕೆ, ಲಕ್ಷಾಂತರ ರೂಪಾಯಿ ಐ.ವಿ.ಎಫ್ ಚಿಕಿತ್ಸೆ ಅಂತ ಒದ್ದಾಡೋ ಜನ ಇರೋ ಈ ಕಾಲದಲ್ಲಿ, ಈ ‘ಕಲಿ’ಯ ಒಂದು ಕ್ಷಣದ ‘ಟೈಂಪಾಸ್’ ಆಟಕ್ಕೆ ಗರ್ಭ ನಿಂತಿದ್ದು ಮಾತ್ರ ‘ಭೂಕಂಪ’ ಸೃಷ್ಟಿಸಿದೆ! ಇದರಿಂದ ‘ಚೆಂಡೆ’ಯ (ಯುವಕನ ಕುಟುಂಬ) ತಲೆಗೆ ಈಗ ‘ಚಂಡಮಾರುತ’ವೇ ಬಂದು ಗುದ್ದಿದಂತಾಗಿದೆ. ‘ಕೊಂದ ಪಾಪ ತಿಂದು ಪರಿಹಾರ’ ಅನ್ನೋ ಗಾದೆ ಮಾತಿನ ಹಾಗೆ, ‘ಬಸಿರು ಮಾಡಿದ ಪಾಪ ಮದುವೆಯೇ ಪರಿಹಾರ ‘ ಅಂತ ಹಿರೀಕರು ‘ತೀರ್ಪು’ ಕೊಡ್ತಾರಾ? ಕಾದು ನೋಡಬೇಕು.

‘ಮಾಂಸಕ್ಕೆ ಮಾಂಸ’ ತಾಗುವಾಗ ಇಲ್ಲದ ವಾಸ್ತು ದೋಷ!
ಹೇಳೋದು ಮರೆತೆ, ಈ ‘ಲವ್ ಬರ್ಡ್ಸ್’ ಹೈಸ್ಕೂಲ್ ದಿನಗಳಿಂದಲೇ ಜೋಡಿಹಕ್ಕಿಗಳು. ದಿನಾರರ ‘ಚುಕ್ಕಿಬುಕ್ಕಿ’ ಮನಸ್ಸು ಲವ್ ಸಾಗರದಲ್ಲಿ ಈಜಾಡಿ, ಈಗ ಇಪ್ಪತ್ತರ ‘ಪರೀಕ್ಷೆ’ ದಾಟಿ ಡಿಗ್ರಿ ಕಾಲೇಜಿನ ‘ಬೆಂಚ್’ ತೇಯುತ್ತಿದ್ದಾರೆ. ‘ನಾವು ದೊಡ್ಡವರಾದೆವು, ನಮಗೆಲ್ಲ ಗೊತ್ತು’ ಎಂದುಕೊಂಡು ಕಳೆದ ವರ್ಷ ಆಗಾಗ ‘ಅಪ್ಪ-ಅಮ್ಮ’ ಆಟವಾಡಿದ್ದರ ‘ಫಲಿತಾಂಶ’ ಈಗ ಹುಡುಗಿಯ ಒಡಲಲ್ಲಿ ‘ಅಂಕುರಾರ್ಪಣೆ’ಯಾಗಿದೆ! ಮಗನ ‘ಚೆಂಡೆ’ ಪೆಟ್ಟಿಗೆ ಹುಡುಗಿಯ ಬಸಿರು ಊದಿಕೊಂಡಂತೆ ವಿಷಯ ದೊಡ್ಡದಾಗಿದೆ. ಹೀಗಾಗಿ ಮನೆಯವರಿಗೆ ಸಂಬಂಧ ಬೆಳೆಸುವ ಮಾತುಕತೆ ಅನಿವಾರ್ಯವಾಯಿತು.
ಆದರೆ, ಹುಡುಗನ ಅಪ್ಪನೋ ‘ಎಕ್ಸ್ಪರ್ಟ್’ ರಾಜಕಾರಣಿ, “ನೀರು ಬಿಡುವ ಸಭೆಯ” ‘ಗೌರವಾನ್ವಿತ’ ಸದಸ್ಯ, ಮೊನ್ನೆ ಮೊನ್ನೆಯವರೆಗೂ ‘ಕಮಲ’ ಪಡೆಯ ‘ಸಿಟಿ ಕಮಾಂಡರ್’! ದೊಡ್ಡ ದೊಡ್ಡ ‘ತಲೆ’ಗಳ, ದೇವಸ್ಥಾನದ ‘ಟ್ರಸ್ಟಿ’ಗಳ ಕಾಂಟ್ಯಾಕ್ಟ್ ಇಟ್ಟುಕೊಂಡ ‘ವಿ.ಐ.ಪಿ.’! ಇಂಥವರಿಗೆ, ಆಸ್ಪತ್ರೆಯಲ್ಲಿ ಹೆಲ್ಪರ್ ಆಗಿರೋ ತಾಯಿ, ಯಾವುದೋ ಅಂಗಡಿಯಲ್ಲಿ ಪ್ಯೂನ್ ಆಗಿರೋ ತಂದೆಯುಳ್ಳ ಮನೆಯಿಂದ ಸೊಸೆ ತರುವುದು ‘ಭಯಂಕರ ವಾಸ್ತು ದೋಷ’ವಾಗಿ ಕಂಡಿದೆ!
‘ಮಾಂಸಕ್ಕೆ ಮಾಂಸ’ ಉಜ್ಜುವಾಗ ಇಲ್ಲದ ದೋಷ, ಈಗ ಮದುವೆ ಪ್ರಪೋಸಲ್ ಬಂದಾಗ ಪ್ರತ್ಯಕ್ಷವಾಗಿದ್ದು ‘ಕಾಮಿಡಿ ಆಫ್ ಎರರ್ಸ್’ ಅಷ್ಟೇ! ಈ ‘ದೋಷ’ಕ್ಕೆ ಪರಿಹಾರವಾಗಿ, ‘ಊದಿದ ಚರ್ಮವನ್ನು (ಭ್ರೂಣವನ್ನು) ಸೈಲೆಂಟ್ ಆಗಿ ಸ್ಕೆಚ್ ಹಾಕಿ ತೆಗೆದುಬಿಡುವುದೇ ಬೆಸ್ಟ್ ರೂಟ್’ ಅಂತ ‘ವಾಸ್ತುಶಿಲ್ಪಿ’ಯು ‘ಕಾಷ್ಟಶಿಲ್ಪಿ’ಗೆ (ಯುವತಿಯ ತಾಯಿಗೆ) ‘ಈಝೀ (E G) ಟಿಪ್ಸ್’ ಕೊಟ್ಟರಂತೆ. ಆದರೆ, “ಸಾರ್, ಆಲ್ರೆಡಿ ‘ಲಾಸ್ಟ್ ಡೇಟ್’ ಮುಗಿದಿದೆ, ‘ಆಫರ್ ಕ್ಲೋಸ್ಡ್'” ಎಂಬ ಉತ್ತರ ಎದುರುಗಡೆಯಿಂದ ಬಂದಿದೆ.
ಇನ್ನು ಎಸ್ಕೇಪ್ ಆಗೋಕೆ ಬೇರೆ ‘ರೂಟ್’ ಕಾಣದಿದ್ದಾಗ ನಮ್ಮ ‘ವೇಷ್ಟಿ’ಯವರು (ಯುವಕನ ತಂದೆ) ‘ಸೂಪರ್ ಟೆಕ್ನಿಕಲ್ ಲಾ ಪಾಯಿಂಟ್’ ತೆಗೆದಿದ್ದಾರೆ: “ನನ್ನ ಮಗ ಅವಳ ಜೊತೆ ‘ಕ್ಲೋಸ್’ ಆಗಿದ್ದು ದೀಪಾವಳಿ ಟೈಮಲ್ಲಿ, ಆದ್ರೆ ಅವಳಿಗೆ ‘ಗುಡ್ ನ್ಯೂಸ್’ ಆಗಿದ್ದು ಚೌತಿ ಹಬ್ಬದ ಸಮಯದಲ್ಲಿ. ಇದು ನಮ್ಮ ‘ಪ್ರಾಡಕ್ಟ್’ ಅಲ್ಲ, ಯಾವುದೋ ‘ಡ್ಯೂಪ್ಲಿಕೇಟ್ ಪಿಂಡ’. ನಮಗೂ ಇದಕ್ಕೂ ‘ನೋ ಕನೆಕ್ಷನ್’, …” ಅಂತ ಡೈಲಾಗ್ ಹೊಡೆದಿದ್ದಾರೆ. ಆದರೆ ‘ಚೆಂಡೆ’ಯ ಭಾವಿ ಬೀಗತಿ( ಹುಡುಗಿಯ ತಾಯಿ) ಇಂತಹ ‘ಗಂಡು ಸಿಂಗ’ಗಳನ್ನೆಲ್ಲಾ ಎಷ್ಟು ನೋಡಿಲ್ಲ? ಎಂತೆಂತಹವರನ್ನೇ ‘ಮಿಕ್ಸಿ’ಯಲ್ಲಿ ಅರೆದು, ‘ಜ್ಯೂಸ್’ ಮಾಡಿ, ‘ಮಣ್ಣು’ ಮುಕ್ಕಿಸಿದವಳು ಆಕೆ ತಡಿ ಮಗನೇ, ನಿನಗೆ ‘ಸ್ಪೆಷಲ್ ಕ್ಲಾಸ್’ ತಗೊತೀನಿ!” ಅಂತ ಆಕೆ ಸೀದಾ ಹೋಗಿದ್ದು ಪಂಚಾಯಿತಿ ಕಟ್ಟೆಗೆ.
ಮೊನ್ನೆ ಮೊನ್ನೆ ತಾನೇ ಡಾಕ್ಟ್ರುಗಳು ಆ ಪಂಚಾಯಿತಿ ಕಟ್ಟೆಯವರಿಗೆ ‘ಕ್ಲಾಸ್’ ತಗೊಂಡು, ‘ವಾರ್ನಿಂಗ್’ ಕೊಟ್ಟು ಹೋಗಿದ್ರು… ಆದ್ರೆ, ಇವರು ‘ಹಿಂದಿನ ಪುಟ ಮರೆತುಬಿಡಿ’ ಅಂತ ಮತ್ತೆ ಅದೇ ‘ಹಳೆ ಚಾಳಿ’ ಶುರು ಮಾಡಿದ್ದಾರೆ!
ಅಲ್ಲಿ ‘ಜಡ್ಜ್ಮೆಂಟ್’ ಸೀಟಲ್ಲಿ ಕೂತವರು, “ಹೇಳಿ, ನಮಗೆಷ್ಟು?” ಅಂತ ‘ರೇಟ್ ಕಾರ್ಡ್’ ಕೇಳಿದ್ದಾರೆ. ‘ಚೆಂಡೆ’ ಬಾರದ ಸ್ವರವನ್ನು ಕಷ್ಟಪಟ್ಟು ಗಂಟಲಿಂದ ಕ್ಷೀಣ ಸ್ವರ ಹೊರಡಿಸಿ ’50’ (ಸಾವಿರವೋ, ಲಕ್ಷವೋ ದೇವರಿಗೇ ಗೊತ್ತು!) ಅಂತ ‘ಮುಲುಕಿದೆ’. ‘ಚೆಂಡೆ’ಯ ಸದ್ದಿನಲ್ಲಿ ಮೊದಲಿದ್ದ ‘ಧಮ್’, ‘ತಾಳ’, ‘ಲಯ’ ಎಲ್ಲ ‘ಮಿಸ್ಸಿಂಗ್’ ಆಗಿರೋದನ್ನ ‘ನೋಟ್’ ಮಾಡಿಕೊಂಡ ಪಂಚಾಯಿತಿ ಕಟ್ಟೆಯ ‘ಹೆಡ್ಮಾಸ್ಟರ್’, “ಏನಪ್ಪಾ 50? ಅದು ನಮ್ಮ ಮೂರು ತಾಲೂಕಿನ ‘ದೊಡ್ಡ ಸಾಹೇಬ್ರ’ ಒಂದು ದಿನದ ‘ಚಾಯ್-ಪಾನಿ’ ಖರ್ಚಿಗೂ ಸಾಲಲ್ಲ. 25( ಲಕ್ಷ ಕ್ಯಾಶ್) ರೆಡಿ ಮಾಡು” ಎಂದಿದೆ. ಆಗ ‘ವಾಸ್ತು ಶಿಲ್ಪಿ’ಗೆ ತನ್ನದೇ ‘ಚೆಂಡೆ’ಯ ಕೋಲಿನಿಂದ (ಬಡಿತಿಗೆ) ಯಾರೋ ತನ್ನ ತಲೆಗೇ ಬಡಿಯುತ್ತಿರುವಂತೆ ‘ಫೀಲ್’ ಆಗಿದೆ!
ತಕ್ಷಣ ಮಿದುಳು ‘ಶಟ್ಡೌನ್’ ಆಗಿ, ಕಣ್ಣಿಗೆ ‘ಕತ್ತಲು’ ಕವಿದಂತಾಗಿದೆ. ಸೀದಾ ‘ಕಮಲ’ ಪಾಳಯದ ‘ದೊಡ್ಡಣ್ಣ’ಗಳ ಮನೆ ಬಾಗಿಲಿಗೆ ಹೋಗಿ ‘ಸಾಷ್ಟಾಂಗ ನಮಸ್ಕಾರ’ ಹಾಕಿದ್ದಾನೆ. ಆದ್ರೆ, ಅವರು ತಮ್ಮ ‘ಟ್ರೇಡ್ಮಾರ್ಕ್’ ಸ್ಟೈಲಲ್ಲಿ “ನಾಳೆ ಬಾ… ನಾಡಿದ್ದು ಬಾ…” ಅಂತ ತಲೆ ತಪ್ಪಿಸಿಕೊಂಡು ಓಡಾಡೋಕೆ ಶುರು ಮಾಡಿದ್ದಾರೆ. ಇನ್ನೊಂದೆಡೆ, ಸಾಮೂಹಿಕ ವಿವಾಹದ ಮುಂಚೂಣಿ ನಾಯಕ, ಗಡ್ಡಧಾರಿ ‘ಪವರ್ ಲೀಡರ್’ ಕೂಡ “ಚೆಂಡೆ ನಾದಕ್ಕೆ ಬೆಂಬಲಿಸೋಕೆ ಹೋಗಿದ್ದಾರೆ.. “ಡಿಸೆಂಬರ್ ಆಗಿದ್ರೆ, ನಮ್ಮ ‘ಪ್ಯಾಕೇಜ್’ನಲ್ಲೇ ಮದುವೆ ‘ಡೀಲ್’ ಮುಗಿಸಬಹುದಿತ್ತು” ಅನ್ನೋ ‘ಒಳ ಆಸೆ’ ಕೂಡ ಅವರ ‘ಮನದಾಳ’ದಲ್ಲಿತ್ತಂತೆ. ಆದ್ರೆ, ಅವರ ಯಾವ ‘ಐಡಿಯಾ’ವೂ ‘ವರ್ಕೌಟ್’ ಆಗಲಿಲ್ಲ.
ಕೊನೆಗೆ, ಮೊನ್ನೆ ನಡೆದ ‘ಮಹೋತ್ಸವ’ ‘ಸೂಪರ್ ಹಿಟ್’ ಆಗೋಕೆ ತಾನು ‘ಧರ್ಮದರ್ಶಿ’ಗಳಿಗೆ ‘ಸಪೋರ್ಟ್’ ಕೊಟ್ಟಿದ್ದು ‘ಫ್ಲ್ಯಾಶ್ಬ್ಯಾಕ್’ ಆಗಿದೆ. ತಕ್ಷಣ ಹೋಗಿ ಅವರ ‘ಪಾದಸೇವೆ’ ಮಾಡಿದ್ದಾನೆ. ಧರ್ಮದರ್ಶಿಗಳಿಗಾದರೋ, ‘ಸಕೃದೇವ ಪ್ರಪನ್ನಾಯ ತವಾಸ್ಮೀತಿ ಚ ಯಾಚತೇ । ಅಭಯಂ ಸರ್ವಭೂತೇಭ್ಯೋ ದದಾಮ್ಯೇತದ್ ವ್ರತಂ ಮಮ ॥’ ಎಂಬ ರಾಮನ ಶ್ಲೋಕ ನೆನಪಾಯಿತು. ಶರಣು ಬಂದವರನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು, ಅವರಿಗೆ ರಕ್ಷಣೆ ನೀಡಬೇಕು ಎಂಬ ನಿಲುವಿಗೆ ಬಂದ ಅವರು, ಯುವಕನ ತಂದೆಯನ್ನು ಪುತ್ತೂರಿನ ‘ಗುರಿಕಾರ’ರ ಬಳಿ ಕರೆದುಕೊಂಡು ಹೋದರು.
ಗುರಿಕಾರರು ಪಕ್ಷಾತೀತ ವ್ಯಕ್ತಿಯಂತೆ ಬಿಂಬಿಸಿದರೂ , ಅವರಿಗೆ ತಮ್ಮ ಸ್ವ ಪಕ್ಷದವರಿಗಿಂತ ತಮ್ಮ ಮೂಲ ಪಕ್ಷದವರ ಮೇಲೆ ಒಂದಷ್ಟು ಮಮಕಾರ ಹೆಚ್ಚೇ ಇತ್ತು. ಅವರು ಪಂಚಾಯಿತಿ ಕಟ್ಟೆಗೆ ಫೋನ್ ಮಾಡಿ, “ಏನ್ರೀ ದಾರಿ, ಹೇಳಿ ಸಾರ್?” ಅಂತ ‘ಸೌಂಡ್’ ಮಾಡಿದ್ದಾರೆ. “ಒಂದೇ ದಾರಿ, ‘ಸರ್ಕಾರಿ’ ಮದುವೆ. ಇಲ್ಲಾಂದ್ರೆ ಇದು ‘ಜೈಲಿಗೆ ಹೋಗೋ ಹೈವೇ'” ಅಂತ ಅಲ್ಲಿಂದ ‘ರಿಪ್ಲೈ’ ಬಂದಿದೆ. ವಿಪರ್ಯಾಸ ಅಂದ್ರೆ, ಮದುವೆಯಾಗೋಕೆ ಹುಡುಗನ ‘ವಯಸ್ಸಿನ ಮೀಟರ್’ ಇನ್ನೂ 21ಕ್ಕೆ ಮುಟ್ಟಿಲ್ಲ! ಮುಂದಿನ ಜೂನ್ ಎಂಡ್ 21 ‘ಕಂಪ್ಲೀಟ್’ ಆಗಿ 22ಕ್ಕೆ ‘ಎಂಟ್ರಿ’ ಕೊಡ್ತಾನೆ. ಅಲ್ಲಿವರೆಗೂ ‘ಮದುವೆ ಭಾಗ್ಯ’ ಇಲ್ಲ. ಈ ‘ಲೀಗಲ್ ಪ್ರಾಬ್ಲಂ’ಅನ್ನು ಗುರಿಕಾರರು ಹುಡುಗಿ ಕಡೆಯವರ ಹತ್ತಿರ ಹೇಳಿದ್ದಾರೆ. “ಅಯ್ಯೋ, ಅಷ್ಟರೊಳಗೆ ‘ಡೆಲಿವರಿ’ ಆಗಿ, ‘ಬೇಬಿ ಔಟ್’ ಆಗಿಬಿಡುತ್ತಲ್ಲ!” ಅಂತ ಹುಡುಗಿ ಕಡೆ ಟೆನ್ಷನ್! “ಅಬ್ಬಾ, ಇದೊಳ್ಳೆ ‘ಫಜೀತಿ’ ಆಯ್ತಲ್ಲಪ್ಪಾ!” ಅಂದ್ಕೊಂಡ ಗುರಿಕಾರರು, “ಸರಿ ಬಿಡಿ, 21 ತುಂಬಿದ ಕೂಡಲೇ ‘ನಾನು ನಿಂತು’ ಮದುವೆ ಮಾಡಿಸ್ತೀನಿ, ಇದು ನನ್ನ ‘ಗ್ಯಾರಂಟಿ’!” ಅಂದಿದ್ದಾರೆ. ಹುಡುಗಿ ಕಡೆಯವರು “ಸರಿ, ಓಕೆ ಡೀಲ್!” ಅಂದಿದ್ದಾರೆ. ‘ಚೆಂಡೆ’ಯ (ಯುವಕನ) ಕಡೆಯವರೂ ಗತ್ಯಂತರವಿಲ್ಲದೆ ಗೋಣು ಅಲ್ಲಾಡಿಸಿದಂತೆ ಮಾಡಿದ್ದಾರೆ.
‘ಮದುವೆಗೆ ಮುಹೂರ್ತ ನಿಗದಿಪಡಿಸಿ, ನಂತರ ಮಗುವಿನ ತೊಟ್ಟಿಲು ಶಾಸ್ತ್ರವನ್ನೂ ಮಾಡುತ್ತೇವೆ’ ಎಂದು ಮುಚ್ಚಳಿಕೆ ಬರೆಸಿಕೊಂಡಿರುವ ಪಂಚಾಯಿತಿ ಕಟ್ಟೆಯವರು, ‘ಒಳ್ಳೆಯದಾಗಲಿ’ ಎಂದು ಹರಸಿ ಕಳುಹಿಸಿದ್ದಾರೆ. ಆಮೇಲೆ ನೋಡಿ, ‘ಕ್ಯಾಶ್’ ಕೈ ತಪ್ಪಿ ಹೋದ ‘ದುಃಖ’ದಲ್ಲಿ, ಸಿಕ್ಕ ಸಿಕ್ಕ ಮೀಡಿಯಾದವರಿಗೆ ‘ಬ್ರೇಕಿಂಗ್ ನ್ಯೂಸ್’ ಅಂತ ‘ಫಾರ್ವರ್ಡ್’ ಮೆಸೇಜ್ ಕಳಿಸುತ್ತಿದ್ದಾರೆ!
ಇತ್ತ, ತನ್ನ ‘ಪ್ಲಾನ್ A’ ವರ್ಕೌಟ್ ಆಗದಿದ್ದಾಗ ‘ಚೆಂಡೆ’ ಒಳಗೊಳಗೆ ಕುದಿಯುತ್ತಿದ್ದಾನೆ. ಈ ಮದುವೆಯಾದ್ರೆ, ನನಗೆ ಮಗನೇ ಇಲ್ಲದಹಾಗೆ. ನನಗೆ ಮಗ ಇಲ್ಲದಿದ್ರೆ, ಭಾವಿ ಸೊಸೆ ‘ಆಟೋಮ್ಯಾಟಿಕ್’ ಆಗಿ ವಿಧವೆ ಆಗ್ತಾಳೆ” (ಅಂದರೆ,ಮಗ ಸೂಸೈಡ್ ಮಾಡಿಕೊಳ್ಳುತ್ತಾನೆ ) ಎಂಬ ‘ವಾರ್ನಿಂಗ್ ಮೆಸೇಜ್’ ಅನ್ನು ಹುಡುಗಿ ಮನೆಗೆ ‘ಪರೋಕ್ಷವಾಗಿ ಸೆಂಡ್ ‘ ಮಾಡಿಸಿದ್ದಾರಂತೆ. ‘ಸೈಲೆಂಟ್’ ಆಗಿ ಗರ್ಭಪಾತ ಮಾಡಿಸೋಕೆ ‘ವಾಸ್ತು ತಜ್ಞ’ರು ಒಂದು ‘ಮಾಸ್ಟರ್ ಪ್ಲಾನ್’ ರೆಡಿ ಮಾಡಿದ್ದಾರಂತೆ. ಆದ್ರೆ, ‘ಮೆಡಿಕಲ್ ಸೈನ್ಸ್’ ಪ್ರಕಾರ, “ಸಾರಿ, ಆ ಚಾಪ್ಟರ್ ಕ್ಲೋಸ್ ಆಗಿದೆ” ಅಂತ ಡಾಕ್ಟರ್ ಹೇಳಿಬಿಟ್ಟಿದ್ದಾರೆ.
ಕಳೆದ ಕೆಲ ವರ್ಷದಿಂದ ‘ರಾಕೆಟ್’ ವೇಗದಲ್ಲಿ ಸಾಗುತ್ತಿದ್ದ ‘ವೇಷ್ಟಿ’ಯವರ ಬದುಕು ಹೀಗೇಕೆ ‘ಪಂಕ್ಚರ್’ ಆಗಿ, ‘ನಾಯಿ ಪಾಡು’ ಆಯ್ತು? ಅನ್ನೋದೇ ಈಗ ‘ಮಿಲಿಯನ್ ಡಾಲರ್’ ಪ್ರಶ್ನೆ.

Miಪರವೂರಿನ ‘ಸೀಮೆ ದೇವರು’ ದೇವಸ್ಥಾನದ ಗರ್ಭಗುಡಿಗೆ ‘ಎಂಟ್ರಿ’ ಕೊಟ್ಟು, ಅಲ್ಲಿ ಮೆರೆದದ್ದು ದೇವರ ‘ಶಾಪ’ಕ್ಕೆ ಕಾರಣವಾಯ್ತಾ? ಅಥವಾ, ಕೆಲ ವರ್ಷದ ಹಿಂದೆ ಖರೀದಿಸಿದ ಜಾಗದಲ್ಲಿ ಮನೆ ಕಟ್ಟೋಕೆ ಅಂತ ಅಲ್ಲಿದ್ದ ‘ನಾಗಪ್ಪ’ನ ಸನ್ನಿಧಿಯನ್ನು ‘ಶಿಫ್ಟ್’ ಮಾಡಿ, ‘ಬ್ರಹ್ಮಕಲಶ’ ಮಾಡಿಸಿದ್ರಲ್ಲ, ಆ ನಾಗನೇ ಇವರ ‘ಸ್ಥಾನ’ವನ್ನು ‘ಪಲ್ಲಟ’ ಮಾಡಿದ್ನಾ? ಇಲ್ಲಾಂದ್ರೆ, ಸೀಮಾಧಿಪತಿಯ ಕೆರೆಯಲ್ಲಿ ‘ವರುಣ’ ದೇವ್ರನ್ನ ಹುಡುಕೋ ‘ಆಪರೇಷನ್’ನಲ್ಲಿ ಈ ‘ವಾಸ್ತು ತಜ್ಞ’ ಮಾಡಿದ ‘ಕಿತಾಪತಿ’ಯೇ ಮುಳುವಾಯ್ತಾ?
ಅದಕ್ಕಿಂತ ದೊಡ್ಡ ಕಾಮಿಡಿ ಅಂದ್ರೆ, ಈ ‘ಚೆಂಡೆ’ಯವರ ಪತ್ನಿ ನೂರಾರು ಮಕ್ಕಳಿಗೆ ‘ಸಂಸ್ಕೃತಿ-ಸಂಸ್ಕಾರ’ದ ಬಗ್ಗೆ ಪಾಠ ಹೇಳ್ತಾರಂತೆ! ಆದ್ರೆ, ಅವರು ತಮ್ಮ ಸ್ವಂತ ಮನೆಯೊಳಗಿದ್ದ ‘ಸಂಸ್ಕಾರ ಹೀನ’ರನ್ನು ‘ಐಡೆಂಟಿಫೈ’ ಮಾಡೋಕೆ ಫೇಲ್ ಆಗಿದ್ದು ಮಾತ್ರ ವಿಧಿಯ ವಿಲಾಸವೇ ಸರಿ!

Leave a Comment