
ಕ್ರೌರ್ಯ, ಮೋಸ, ದಾದಾಗಿರಿ, ಗೂಂಡಾಗಿರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಫೇಮಸ್ಸ್ ಪುಣ್ಯ ಕ್ಷೇತ್ರದ ಒಡೆತನ ಹೊಂದಿದ ಡಿ ಗ್ಯಾಂಗ್. ಇಂತಹಾ ನಟೋರಿಯಸ್ ಡಿ ಗ್ಯಾಂಗ್’ಗೇ ಚಳ್ಳೆ ಹಣ್ಣು ತಿನ್ನಿಸಿ ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕಿನಲ್ಲಿ ದ್ವಿಚಕ್ರ ಕಂಪೆನಿಯ ಡೀಲರ್ ಶಿಪ್ ಪಡೆದುಕೊಂಡದ್ದು NT ಭಟ್. ಡಿ ಗ್ಯಾಂಗ್ ಜತೆ ಸ್ಪರ್ಧೆ ಮಾಡುವುದು ಮತ್ತು ಅವರ ಜತೆ ವ್ಯವಹಾರದಲ್ಲಿ ಕಾಲೂರಿ ಫೈಟ್ ಮಾಡೋದು ಅಳ್ಳೆದೆಯವರಿಗೆ ಸಾಧ್ಯವಿಲ್ಲ. ಆದರೇ ಅಂತಹದೊಂದು ತಾಕತ್ತು , ಧೈರ್ಯ, ಎದೆಗಾರಿಕೆ ತೋರಿಸಿದವರು ಪುತ್ತೂರಿನ NT ಭಟ್ರು. ಅಷ್ಟರಮಟ್ಟಿಗೆ ಅವರು ಕಟ್ಟಿದ್ದು ಯಶಸ್ವಿ ಉದ್ಯಮ ಸಾಮ್ರಾಜ್ಯ .ಈ ಯಶಸ್ಸಿನ ಜತೆಗೆ ಅವರಿಗೆ ಬಳುವಳಿಯಾಗಿ ಬಂದದ್ದು ದುರಾಂಹಕಾರ, ಸಿಟ್ಟು, ಕೊಬ್ಬು, ಕ್ರೌರ್ಯ ! ಅವರು ವರ್ಷ ವರ್ಷ ಜಿಲ್ಲೆಯಲ್ಲಿ ತನ್ನ ಉದ್ದಿಮೆಯನ್ನು ವಿಸ್ತರಿಸುತ್ತಾ ಬಂದ್ರು .ಅದೇ ವೇಗದಲ್ಲಿ ದುರಾಂಹಕಾರ, ಸಿಟ್ಟು, ಕೊಬ್ಬು, ಕ್ರೌರ್ಯ ಕೂಡ ಅವರಲ್ಲಿ ವಿಸ್ತಾರಗೊಳ್ಳುತ್ತಲೇ ಹೋಯಿತು. ಅವರಿಗೊಬ್ಬ ಮಗ. ಅಹಂಕಾರದಲ್ಲಿ ಅಪ್ಪನ ತದ್ರೂಪು. ಕ್ರೌರ್ಯದಲ್ಲಿ ಅಪ್ಪನಿಗಿಂತ ಒಂದು ಕೈ ಹೆಚ್ಚು. ಸಿಟ್ಟು ಸದಾ ಮೂಗಿನ ತುದಿಯಲ್ಲೇ ಕುಣಿಯುತ್ತಿರುತ್ತದೆ. ಆತ ಬೋಳ್ವಾರ್ʼನ ತನ್ನ ಟೂ ವ್ಹೀಲರ್ ಶೋ ರೂಂ ನಲ್ಲಿ ಹೊಡೆಸಿದ್ದು, ಸ್ವತ: ʼಹೊಡೆಸಿಕೊಂಡʼ ಕಥೆ ಹೇಳಲು ಶುರು ಮಾಡಿದರೆ ದಿನ ಪೂರ್ತಿ ಮುಗಿಯದು. ಅಂತಹ ದುರುಳ, ಹೀಗಾಗಿ ಆ ಎಲ್ಲ ಕಥೆ ಹೇಳಿ ನಿಮ್ಮನ್ನು ಬೋರ್ ಹೊಡೆಸೊದಿಲ್ಲ. ಒಂದೆರೆಡು ಸ್ಯಾಂಪಲ್ ಖಂಡಿತ ಹೇಳುತ್ತೇವೆ. ಅದಕ್ಕಿಂತ ಮೊದಲು ಗನ್ ವಿಷಯ ನಿಮ್ಮ ಮುಂದಿಡುತ್ತೇವೆ.
ಎನ್. ಟಿ ಈಗ ಎಂಪ್ಟಿಎನ್ ಟಿ ಹತ್ರ ಹತ್ತಿರ ಹತ್ತಿರ 10 ಶೋ ರೂಂಗಳಿವೆ. ಹೀಗಾಗಿ ಅವನಲ್ಲಿ ಥಂಡಿಯಾಗಿ ಹಣ ಇದೆ ಎಂದೇ ಜನರು ನಂಬಿದ್ರು. ಆದರೇ ಅವನಿಗೆ (ಕುಟುಂಬ ಸದಸ್ಯರನ್ನು ಸೇರಿಸಿ) ಇವತ್ತಿನ ದಿನಕ್ಕೆ ಲೆಕ್ಕ ಹಾಕಿದ್ರೆ ಆಜುಬಾಜು 40 ಕೋಟಿ ಸಾಲ ಇದೆ. ಸಾಲದಲ್ಲಿ ಈ ʼತಿರುಮಲʼ ಏಳು ಬೆಟ್ಟದ ಮೇಲೆ ಕುಳಿತ ಆ ʼತಿರುಮಲʼನಿಗೆ ಸರಿಸಾಟಿ. ಈ ಸಾಲದ ಲೆಕ್ಕದಲ್ಲಿ ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡ ತಿರುಮಲ ಶೆಲ್ ಪೆಟ್ರೋಲ್ ಬಂಕ್ ತೆರೆಯಲು ಪುತ್ತೂರಿನ ಕುಶಲ ಕರ್ಮಿಗಳ ಸೊಸೈಟಿ ನೀಡಿದ 5 ಕೋಟಿಯೂ ಸೇರಿದೆ. ಈ ಸಾಲ ತೀರಿಸಲು ಅವನ ಎಲ್ಲಾ ಶೋ ರೂಂ ಮಾತ್ರವಲ್ಲದೆ ಇರೋ ಬರೋ ಸ್ಥಿರಾಸ್ಥಿ ಚರಾಸ್ತಿ ಜತೆಗೆ ಕುಟುಂಬ ಸದಸ್ಯರ ಎರಡೆರಡು ಕಿಡ್ನಿಯೂ ಮಾರಬೇಕಾದೀತು ಅನ್ನುವ ಸತ್ಯ ನಾವು ಬರೆದರೆ ಅದು ಕ್ರೌರ್ಯ ಅದೀತೇನೋ! ಆದರೆ ಅದೇ ವಾಸ್ತವ ಸತ್ಯ.ಪರಿಸ್ಥಿತಿ ಹೀಗಿರುವಾಗ ಈ ಅಪ್ಪ ಮಗನ ಜೋಡಿ ವಾರದ ಹಿಂದೆ ಕರ್ನಾಟಕ ಬ್ಯಾಂಕ್’ನ ಪುತ್ತೂರು ಬ್ರ್ಯಾಂಚಿಗೆ ಹೋಗಿ ಬರೋಬ್ಬರಿ ನಾಲ್ಕು ಕೋಟಿ ರೂಪಾಯಿ ಸಾಲಕ್ಕೆ ಅಪ್ಲಿಕೇಷನ್ ಕೊಟ್ಟು ಬಂದಿದ್ದರು. ಇದರ ನಡುವೆಯೇ ಈ ಪಿಸ್ತೂಲ್ ಪುರಾಣ ಹೊರಬಂದಿದ್ದು ತಿರುಮಲ NTಯ ಲಡ್ಡು ಕಲಬೆರಕೆ ಎಂಬುದು ಜಗಜ್ಜಾಹೀರಾಗಿದೆ. ಇನ್ನು ಈ ಪತ್ತೀಸ್ ಜೋಡಿಗೆ ಸಾಲ ಕೊಡಲು ಕರ್ನಾಟಕ ಬ್ಯಾಂಕಿನವರೇನು ಕಿವಿಯಲ್ಲಿ ಹೂ ಇಟ್ಟುಕೊಂಡಿದ್ದಾರಾ? ಅಲ್ಲಿಗೆ NT ಈಗ ಕಂಪ್ಲಿಟ್ ಎಂಪ್ಟಿ ಆಗಿದ್ದಾನೆ.
ಕೆಲ ವರ್ಷಗಳ ಹಿಂದೆ NT ಭಟ್ ತನ್ನ ಕುಲಪುತ್ರನ ಹೆಂಡತಿಯ ಹೆಸರಿನಲ್ಲಿ SBI ಬ್ಯಾಂಕ್’ನಿಂದ ಕೋಟಿಗಟ್ಟಲೆ ಸಾಲ ತಕ್ಕೊಂಡಿದ್ದ. ಅದರ ಕಂತುಗಳನ್ನು ಸರಿಯಾಗಿ ಪಾವತಿಸುತ್ತಿರಲಿಲ್ಲ. ಬ್ಯಾಂಕಿನವರು ಕೇಳಿದ್ರೆ ತನ್ನ ಖಾಯಂ ಚಾಳಿಯಂತೆ ಉಡಾಫೆ ಶೈಲಿಯಲ್ಲಿ ಬ್ಯಾಂಕ್ ಸಿಬ್ಬಂದಿಗಳಿಗೆ ರೋಪ್ ಹಾಕುತ್ತಿದ್ದ. ಕಾಯುವಷ್ಟು ಕಾದು, ನೋಡುವಷ್ಟು ನೋಡಿ ಕೊನೆಗೆ ಬ್ಯಾಂಕಿನವರು ನಿನ್ನೆ ಮನೆಗೆ ರಿಕವರಿ ಮ್ಯಾನೇಜರ್ ಹಾಗೂ ಸ್ಟಾಪ್’ಗಳನ್ನು ಕಳುಹಿಸಿದ್ದಾರೆ. ಅಲ್ಲಿಗೆ ಹೋದಾಗ ಮನೆಯಲ್ಲಿ NTಯ ಹೆಂಡತಿ ಬಾಗಿಲು ತೆಗೆದು ಒಳ ಬರಮಾಡಿಕೊಂಡಿದ್ದಾರೆ. ಬ್ಯಾಂಕ್’ನವರು ಬಂದ ಸುದ್ದಿ ಕೇಳಿ ಮನೆಗೆ ದೌಡಯಿಸಿದ ಮಗ *ವಿ’ನಾಶ’ ಅವರ ಮೇಲೆ ಕೂಗಾಡಿದ್ದಾನೆ. ಇನ್ನು ಕಾನೂನು ರೀತಿ ಕ್ರಮ ಕೈಗೊಳ್ಳೊಣ ಎಂದು ಬ್ಯಾಂಕಿನವರು ಹೊರಡಲು ಅನುವಾದಾಗ ಬ್ಯಾಂಕಿನವರನ್ನು ಮನೆಯೊಳಗೆ ಕೂಡಿ ಹಾಕಿ ಲೆಪ್ಟ್ ರೈಟ್ ತಕ್ಕೊಂಡಿದ್ದಾನೆ. ಕೆಲ ಹೊತ್ತಿನಲ್ಲಿ NT ಯೂ ಮನೆಗೆ ಬಂದಿದ್ದು ಅಲ್ಲಿ ಬ್ಯಾಂಕಿನ ರಿಕವರಿಯವರನ್ನು ನೋಡಿ ಆತನ ಪಿತ್ತ ನೆತ್ತಿಗೆರಿದೆ. ಒಳಗೆ ಹೋದವನೇ ಗನ್ ತಕ್ಕೊಂಡು ಬಂದು ಬ್ಯಾಂಕಿನ ಮೂವರು ಸಿಬಂದಿಗಳನ್ನು ಉಡಾಯಿಸುವುದಾಗಿ ತೇಟ್ ʼಉಳಿದವರು ಕಂಡಂತೆʼ ಸಿನಿಮಾದ ರಕ್ಷಿತ್ ಶೆಟ್ಟಿ ಅವತಾರದಲ್ಲಿ ಪೋಸ್ ಕೊಟ್ಟಿದ್ದಾನೆ. ಈ ವೀರಭದ್ರವಾತಾರಿಯ ಮುಂದೆ ಸಾಲ ಕೊಟ್ಟ ಬ್ಯಾಂಕಿನವರು ಕೋಡಂಗಿಗಳಾಂತಾಗಿದ್ದಾರೆ.
“ಬದುಕಿದರೆ ಬೇಡಿ ತಿಂಬೆ” ಎಂದು ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದ ಬಡಪಾಯಿ ಬ್ಯಾಂಕ್ ಸಿಬ್ಬಂದಿಗಳು ಪುತ್ತೂರು ನಗರ ಪಂಚಾತಿಕೆ ಕಟ್ಟೆ ಬಳಿ ಹೋಗಿದ್ದಾರೆ. ಹಿಂತಿರುಗಿಸಲು ಇಲ್ಲದ ಸಾಲದ ದುಡ್ಡಿನಲ್ಲಿ ಮೆರೆಯುತ್ತಿರುವ NT ಕೊಡುವ ಮಂತ್ಲಿ ಎಂಜಲು ಕಾಸಿಗೆ ನಾಲಿಗೆಯೊಡ್ಡಿ ಅಭ್ಯಾಸವಾಗಿರುವ ಅಲ್ಲಿನ ಕೆಲ ಖಾಕಿ ಸಿಬ್ಬಂದಿಗಳು ಈ ಬಾರಿ ಇನ್ನಷ್ಟು ಗೆರೆಪಬಹುದು ಎಂದು ತಕ್ಷಣ ರಾಜಿ ಪಂಚಾತಿಕೆಗೆ ವೇದಿಕೆ ಸಿದ್ದ ಮಾಡಿದ್ದಾರೆ. ಹಿಂದೊಮ್ಮೆ ತನ್ನ ಕಚೇರಿಯಲ್ಲಿ ದುಡಿಯುವ ಸಿಬಂದಿಯೊಬ್ಬನಿಗೆ NT ಪುತ್ರ ಕೆನ್ನೆಗೆ ಬಾರಿಸಿದ್ದ. ಇವನ ಉಪಟಳ ಸಹಿಸಿ ಸಾಕಾಗಿದ್ದ ಆ ಸಿಬಂದಿ ತನ್ನ ಜತೆ ದುಡಿಯುವ ಮತ್ತಿಬ್ಬರು ಮಿತ್ರರ ಜತೆ ಸೇರಿ ಮಗನ ಮುಖ ಊದುವಂತೆ ನೆಲಕ್ಕೆ ಹಾಕಿ ಬಾರಿಸಿದ್ದರು. ಮಗನ ರಕ್ಷಣೆಗೆ ಬಂದ NTಗೂ ಆದಿನ ನೋವಿನ ಎಣ್ಣೆ ಮೈಗೆ ತಿಕ್ಕುವಂತೆ ಸಿಬಂದಿಗಳು ಮಾಡಿದ್ದರು. ಆದರೆ ಅದರಿಂದ ಪಾಠ ಕಲಿಯದ NT ಪುತ್ರ, ಸಿಬ್ಬಂದಿಯೊಬ್ಬ ತನಗೆ ದುಡಿದ ಸಂಬಳ ಸರಿ ಕೊಡದೆ ಇದ್ದದ್ದನ್ನು ಆಕ್ಷೇಪಿಸಿದಾಗ ಆತನಿಗೆ ಶೋ ರೂಂ ಅಲ್ಲೇ ಹಲ್ಲೆ ಮಾಡಿದ್ದ. ಆಗ ಸಂತ್ರಸ್ತ ಸಿಬ್ಬಂದಿ ಇದೇ ಖಾಕಿ ಪಂಚಾಯಿತಿ ಕಟ್ಟೆಗೆ ಬಂದು ದೂರುಕೊಟ್ಟಿದ್ದ. ಆಗ ಇದೇ ಕಟ್ಟೆ ಸಿಬ್ಬಂದಿಗಳು NT ಮಗನ ಪರ ನಿಂತು ಆ ಪಾಪದ ಸಿಬ್ಬಂದಿಯನ್ನು ಕೇಸ್ ಹಿಂಪಡೆದು ಓಡುವಂತೆ ಮಾಡಿದ್ದರು. ಶೋ ರೂಂ ಪಕ್ಕದಲ್ಲೇ ಇರುವ ತಮಿಳಿನವ ಪಾರ್ಕ್ ಮಾಡಿದ ಗಾಡಿ ಶೋ ರೂಂ ನ ಶೋಭೆಗೆ ಕುಂದು ಉಂಟು ಮಾಡಿತ್ತೆಂದು NT ಮಗ ಅವನಿಗೆ ಮುಖ್ಯ ರಸ್ತೆಯಲ್ಲಿ ಹೊರಳಿಸಿ ಹೊರಳಿಸಿ ಹೊಡೆದಿದ್ದ. ನೂರಾರು ಜನ ಪ್ರತ್ಯಕ್ಷದರ್ಶಿಗಳಿದ್ದರು. ತಮಿಳಿಗ ಹೋಗಿ ದೂರು ಕೊಟ್ರೆ “ಗೂರ್ಖಾ” ಪಡೆ ಮತ್ತೆ ಕಾಸಿನ ಆಸೆಗೆ ಬಿದ್ದು, ಕೇಸ್ ಪುಸ್ಕ ಮಾಡಿದ್ರು. ವರ್ಷದ ಹಿಂದೆ ವಾಹನ ಖರೀದಿ ಮಾಡಿದ ಗ್ರಾಹಕನೊಬ್ಬ ಇವರ ಸೇವಾ ನ್ಯೂನತೆಯ ಬಗ್ಗೆ ವಿಡಿಯೋ ಮಾಡಿ ಹಂಚಿದ್ದು, ಆಗ ಈ NT ಮತ್ತು ಅವನ ಮಗ ಮತ್ತೆ ಪಂಚಾಯಿತಿ ಕಟ್ಟೆಯ ಗುರ್ಖಾ ಪಡೆಯನ್ನು ಛೂ ಬಿಟ್ಟು ಬೆದರಿಸಿ ಹೆದರಿಸಿ ಅವನು ಕ್ಷಮಾಪಣೆ ಕೇಳುವಂತೆ ಮಾಡಿದ್ದರು. ಒಟ್ಟಾರೆ ಈ ಅಪ್ಪ ಮಗನ ರೌಡಿಸಂ ಪ್ರವೃತ್ತಿಗೆ “ಗೂರ್ಖಾ” ಪಡೆ ಬೆಂಗಾವಲಾಗಿ ನಿಂತಿದ್ದರು.
ಪ್ರೈಸ್ ಫಿಕ್ಸ್- ಕಾಂಪ್ರಮೈಸ್..!
ಈಗ ಬ್ಯಾಂಕ್ ಸಿಬ್ಬಂದಿಗಳು ಕೊಟ್ಟ ಕೇಸ್ ಅನ್ನು ರಾಜೀ ಪಂಚಾತಿಕೆ ಮಾಡಿಸಲು ಈ ಬಾರಿಯೂ ಪೋಸ್ಟ್ ಆಫೀಸ್ ಮುಂಭಾಗದ ಪಂಚಾಯಿತಿ ಕಟ್ಟೆಯಲ್ಲಿ ಗುರ್ಖಾ ಪಡೆಯವರು ಪದ್ಮಾಸನ ಹಾಕಿ ಚಕ್ಕಳ ಮಕ್ಕಳ ಕೂತಿದ್ರು. NT ಮತ್ತು ಮಗ ಕಾವಿ ಹಾಗೂ ಖಾದಿ ಮೂಲಕ ಬ್ಯಾಂಕಿನವರ ಹಾಗೂ ಖಾಕಿ ಮೇಲೆ ಒತ್ತಡ ಹಾಕಿಸಿ ಕೇಸ್ ಆಗದಂತೆ ನೋಡಲು ಯತ್ನಿಸಿದ್ದಾನೆ. ಪ್ರಕರಣ ರಾಜಿ ಪಂಚಾಯಿತಿಯಲ್ಲಿ ಮುಗಿಸಿದರೆ 1.5 ಲಕ್ಷ ಖಾಕಿ ಪಡೆಗೆ ಇನಾಮು ನೀಡುವ ಆಫರ್ ಮಗ ನೀಡಿದ್ದ. ನಾಯಕ, ಖಳನಾಯಕ ರಾಜಿಯಾಗಿ ಕಥೆ ಇನ್ನೇನು ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ಕುಲಪುತ್ರ ಖಳನಾಯಕ “ನಿನ್ನನ್ನು ನೋಡಿಕೊಳ್ಳುತ್ತೇನೆ” ಎಂದು ತನ್ನ ಎಂದಿನ ಶೈಲಿಯಲ್ಲಿ ಬ್ಯಾಂಕ್’ನವರಿಗೆ ಬೆದರಿಕೆ ಹಾಕಿದ್ದಾನೆ. ಡೈಲಾಗ್ ಕೇಳಿದ್ದೇ ಬ್ಯಾಂಕ್ ಮ್ಯಾನೇಜರ್ ಗೆ ಮೊದಲೇ ಹೆಚ್ಚಾಗಿದ್ದ ಬಿಪಿ ಒಮ್ಮೆಲೇ ಸ್ಟೋಟ ಆಯಿತು. ಕೇಸ್ ಕೊಡುವುದೇ ಅಂತಾ ಅವರು ಪಟ್ಟು ಹಿಡಿದರು. ಕಥೆ ಉಲ್ಟಾ ಹೊಡೆದದ್ದು ನೋಡಿ ಪೊಗದಸ್ತಾಗಿ ಮಾಮೂಲು ಮೇದಿದ್ದ ಗೂರ್ಖ ಪಡೆಗೆ NTಯ ʼಅನ್ನದ ಋಣʼ ನೆನಪಾಗಿ ತಲೆ ನೆಲ ಚಕ್ರದಂತೆ ತಿರುಗಿದೆ. ರಾಜಿ ಪಂಚಾತಿಕೆಗೆಗೆ ಇಲ್ಲದ ಸ್ಟೇಷನ್ ಲಿಮಿಟ್ ಕೇಸ್ ಆಗುವಾಗ ನೆನಪಿಗೆ ಬಂದಿದೆ. “ಕೇಸ್ ಆಂಡ ಮುಲ್ಪ ಆಪುಜ್ಜಿ” ಅಂದಾಗ ಕೊನೆಗೆ ದೂರುದಾರರ ಸವಾರಿ ಸಂಪ್ಯಕ್ಕೆ ಹೋಗಿದೆ. ಆಗ NTಯ 1.5 ಲಕ್ಷದ ಆಫರ್ ಸುದ್ದಿ ಸಿಕ್ಕವರು ಪಿಸ್ತೂಲೇ ಇರಲಿಲ್ಲ ಎನ್ನುವ ಹೊಸ ಕಥೆಯೊಂದನ್ನು “ಜಂಭ” ಕೊಚ್ಚಿ ಮಾಧ್ಯಮಗಳಿಗೆ ಹರಿಬಿಟ್ಟಿದ್ದಾರೆ. ಆದರೇ ಇವರ ಯಾವ ನಖರಗಳಿಗೂ ಜಪ್ಪಯ್ಯ ಅನ್ನದ ಬ್ಯಾಂಕ್ ಸಿಬ್ಬಂದಿ ಚಂಡಿ ಹೊಡೆದು ನಿಂತ ಕಾರಣ ಗತ್ಯಂತರವಿಲ್ಲದೇ ಒಲ್ಲದ ಮನಸ್ಸಿನಿಂದ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ.
ಕೇಸ್ ದಾಖಲು ಬಳಿಕ ಒಂದು ರಾತ್ರಿ ಇಡೀ ಹೊದ್ದು ಮಲಗಿದವರು ಮಾಧ್ಯಮಗಳಲ್ಲೆಲ್ಲ ನ್ಯೂಸ್ ಬಿತ್ತರ ಆದ ಬಳಿಕವೂ ಆರೋಪಿಗಳಿಂದ ಭಾರೀ ಅಂತರ ಕಾಯ್ದುಕೊಂಡು 1.5 ಲಕ್ಷದ ಡ್ರೀಮ್ ಅಲ್ಲೇ ತೇಲಾಡಿಕೊಂಡಿತ್ತು. ಪಿಸ್ತೂಲ್ ಹಿಡಿದ ಗಂಭೀರ ಪ್ರಕರಣದಲ್ಲಿ ತಕ್ಷಣವೇ ಆರೋಪಿಗಳನ್ನು ಬಂಧಿಸಿ ಪಿಸ್ತೂಲ್ ವಶಕ್ಕೆ ಪಡೆಯಬೇಕಾಗಿದ್ದವರು ದೂರು ದಾಖಲಾದ 24 ಘಂಟೆ ಕಳೆದ ಬಳಿಕ NT ಮನೆಗೆ ಉಪಾಹಾರಕ್ಕೆ ತೆರಳುವಂತೆ ತೆರಳಿದ್ದಾರೆ.
ಅಪ್ಪ ಮಗ ಎಸ್ಕೇಪ್..!!
ಮುಂಬಾಗಿಲ ಮುಂದೆ ನೀಲಿ ಜೀಪು ಎಂಟರ್ ಆಗುತ್ತಿದ್ದಂತೆ ಹಿಂಬಾಗಿಲ ಮೂಲಕ ಆರೋಪಿ ಅಪ್ಪ ಮಗ ಎಕ್ಸಿಟ್ ಆಗಿದ್ದಾರೆ. ಅಲ್ಲಿಗೆ ದಾಳಿ ನಾಟಕ, ಕಾಟಾಚಾರದ ಮಹಜರು ಪ್ರಕ್ರಿಯೆ ಮುಕ್ತಾಯವಾಗಿದೆ. ಎರಡು ಕೋಟಿಗೆ ತಿರುಮಲನಿಂದ ಮೂರು ನಾಮ ಹಾಕಿಸಿಕೊಂಡ SBI ಬ್ಯಾಂಕ್ ಇನ್ನೇನು ಮಾಡುತ್ತದೆಯೋ ಕಾದುನೋಡಬೇಕಿದೆ.
ಹಿಜ್ಡಾ ಮಗನಿಂದ ಪತ್ನಿ ಮೂಲಕ ಮಾನಭಂಗಕ್ಕೆ ಯತ್ನದ ದೂರು..!
ಕೇಸ್ ಆಗುವವರೆಗೆ ಥೇಟ್ ಮಹಿಷಾಸುರನಂತೆ ಅಬ್ಬರಿಸುತ್ತಿದ್ದ ಮಗನ ಪ್ಯೂಸ್ , FIR ಆದ ಕೂಡಲೇ ಸಡನ್ ಹೋಗಿದೆ. ಬಳಿಕ ಥೇಟ್ ಹಿಜ್ಡಾ ತರಹ ತನ್ನ ಪತ್ನಿಯ ಕೈಯಲ್ಲಿ ಸುಳ್ಳು ಮಾನಭಂಗದ ಕೌಂಟರ್ ದೂರು ಕೊಡಿಸಿದ್ದಾನೆ. ಈ ಮನೆ ಹಾಳು ಐಡಿಯಾ ಈ ಪೋಲಿಮಾಮಗಳು ಅಲ್ಲದೇ, ಬೇರೆ ಯಾರು ಕೊಡಲು ಸಾಧ್ಯ ? ಪುತ್ತೂರಿನ ಪೋಲಿ ಕಟ್ಟೆ ಇಷ್ಟೊಂದು ಬರಗೆಟ್ಟು ಹೋಗಿದೆ ಎಂದು ನಮ್ಮನ್ನು ಆಳುವವರಿಗೆ ಹೇಳೋರು ಯಾರೂ ? ಈ ಗತಿಗೆಟ್ಟಿಗೆ NT ಹಾಗೂ ಅವನ ಮಗ ಇಷ್ಟೆಲ್ಲಾ ಮೆರೆಯಬೇಕಿತ್ತಾ? ಇದಕ್ಕಿಂದ ಪೊಟ್ಟು ಬಾವಿಗೆ ಹಾರಿ ಸಾಯುವುದು ಒಳ್ಳೆದಿರಲಿಲ್ವಾ ? ಬ್ಯಾಂಕಿನ ಸಾಲ ರಿಕವರಿಯವರು 2 ಕೋಟಿ ಸಾಲಕ್ಕೆ ತನ್ನ ಹೆಂಡತಿಯನ್ನು ಕರೆದ್ರು, ಬಂದ್ರೆ ಸಾಲ ಚುಕ್ತಾ ಆಗುತ್ತೆ ಅಂದ್ರು ಅಂತಾ ಕಂಪ್ಲೇಂಟ್ಕೊ ಕೊಟ್ರೆ ಜನ ನಗಬಾರದ ಜಾಗದಲ್ಲಿ ನಗೋಲ್ವಾ ? ಛೀ ಥೂ ಅಂತಾ ಉಗಿಯೋಲ್ವಾ ? ಅಲ್ಲ ಈ ತರಹ ಕೇಸ್ ಕೊಡಿಸುವವನನ್ನು ಯಾರಾದ್ರೂ ಗಂಡ ಅಂತಾರ? ಅಲ್ಲ ಕಡೇ ಪಕ್ಷ ಗಂಡ್ಸು ಅಂತಾ ಆದ್ರೂ ಕರೀತಾರ..?