
ಸೆಟ್ಟಿಗದ್ದೆಯಲ್ಲಿ ಈ ಎಡಬಿಡಂಗಿ ಅಡ್ಡ ಬೆಲ್ಟ್’ಗೆ ಯಾವ ಅಡ್ಡೆಯೂ ಇಲ್ಲದ ಕಾರಣ ಕತ್ತಲು ಕವಿಯುತ್ತಿದ್ದ ಹಾಗೆ ಕುಪ್ಪಿ ಗ್ಲಾಸ್ ಹಿಡಿಯಲು ದೂರ ಹತ್ತೂರಿಗೆ ಬರಲೇಬೇಕು.ಮನೆಯಿಂದ ಹೊರ ಬಂದರೆ ಬ್ರಾಹ್ಮಣ ಅಲ್ಲದೇ ಇರುವುದರಿಂದ ಎಲ್ಲಿ “ಬೀರ್ ಬಲ್ಲ”ನಾದರೂ ಜಾತಿಗೆ ಅವಮಾನವೇ ಹೊರತು ತನಗಲ್ಲ ಅನ್ನುವ ದೃಢತೆ ಇರುವುದರಿಂದ ಯಾವ ಬಾರ್ ಆದರೂ ಬಾರ್ ಮುಂದೆ ಕಾರ್ ನಿಲ್ಲಿಸಿ ಜಾರ್ ಎತ್ತುತ್ತಿದ್ದ. ಬಂದ ಕೆಲ್ಸಾ ಮುಗಿಸಿ ನೆಟ್ಟಗೆ ಹೋಗಿದ್ದಿದ್ದರೆ ಹೀಗೊಂದು ಕಥೆ ಬರೆಯುವ ಪ್ರಸಂಗವೇ ಬರುತ್ತಿರಲಿಲ್ಲ.
ಉರ್ಪುವುದರಲ್ಲಿ ರಾಜನಾದ ಈ ಎಡಬಿಡಂಗಿ ಈಗಾಗಲೇ ಹತ್ತೂರಲ್ಲಿ ನಾಚಿದ್ದರೂ ಜನರಿಗೆ ಸಮಸ್ಯೆ ಅಂತ ಏನೂ ಇರಲಿಲ್ಲ. ಹಾಗಾಗ ಈ ಎಡೆ ಬಿಡಂಗಿ aLive ಅನ್ನು ಅಷ್ಟಾಗಿ ಗಣನೆಗೆ ತೆಗೆದುಕೊಂಡಿರಲಿಲ್ಲ.ಏರಿದ ಅಮಲಿನಲ್ಲಿ ಪಕ್ಕದ ಟೇಬಲ್ ಗೆ ಸರ್ವ್ ಮಾಡಿದ ಆಹಾರದ ಬಗ್ಗೆ ಜಗಳಕ್ಕೆ ಬೇ*ಶಿ, ರಾ*ಗೆ ಅಂತೆಲ್ಲ ಬೈದು ಕೊನೆಗೆ ಅವರು ಕೊಟ್ಟ ನಾಲ್ಕು ಬಿಸಿ ಬಿಸಿ ಕಜ್ಜಾಯ ತಿಂದು ಮಾಲಿಕೊಂಡು ಮನೆಗೆ ಒಚ್ಚಿದೆ ಈ ಬಾಯಿಹರುಕ.
ವಾರಕ್ಕೊಮ್ಮೆ ದುಬೈ ಶೇಖ್ ಜತೆ ಕೂತು ಮಾತಾಡುವ ಎಡಬಿಡಂಗಿಯನ್ನು ಕೆಲವು ಸಮಯದ ಮೊದಲು ತಮಿಳುನಾಡಿನವರು ಬಂದು ಹುಡುಕುವ ಸ್ಥಿತಿ ಬಂದಿತ್ತು. ಬೆಂಗಳೂರಿನಲ್ಲಿ ಹಲವು ಜನರಿಗೆ ಲಫುಡ ಮಾಡಿ, ಉಂಡೆ ನಾಮ ಇಟ್ಟು ಬಂದಿದ್ದ. ಬೈರಾಸಿನವರ ಜತೆ ಬ್ಯುಸಿ ಇದ್ದ ಕಾರಣ ಏನೋ ಅವರ ಕೈಗೆ ಸಿಗದೆ ಬಚಾವು ಆಗಿದ್ದ. ಇಲ್ಲವಾದರೆ ಅವರು ಇವನ ಮೂಳೆಯೂ ಸಿಗದ ರೀತಿ ರುಬ್ಬಿ ಬಿಸಾಡುತ್ತಿದ್ದರು.
ಪರವೂರಿನ ಮಹಿಳೆಗೆ ಮನೆ ಮಾಡಿ ಕೊಡುವುದಾಗಿ ಆಕೆಯ ಬ್ಯಾಂಕ್ ಖಾತೆಯಲ್ಲಿದ್ದ ಅಷ್ಟೂ ಹಣ ಲಪಟಾಯಿಸಿ ಉಂಡೆ ನಾಮ ಹಾಕಿಸಿ ಆಕೆಗೆ ಬಾಡಿಗೆ ಮನೆ ಭಾಗ್ಯ ತಂದದ್ದಲ್ಲದೆ ಆಕೆಯ ಕೈಯಲ್ಲಿ ದೂರು ಕೊಡಿಸಿ ಯಾರನ್ನೋ ಮಕಾಡೆ ಮಲಗಿಸುವ ಸಂಚು ರೂಪಿಸಿ ಮುಖ ಭಂಗಕ್ಕೆ ಒಳಗಾದ್ದು ಊರೆಲ್ಲ ನಾಥ ಬರುತ್ತಿರುವಾಗಲೇ ಮತ್ತೊಂದು ಯಡವಟ್ಟು ಮಾಡಿಕೊಂಡು ಇದೀಗ ತಾನು ಬಚ್ಚಲು ಬಾಯಿ ಅಂತ ಊರಿಗೆ ಸಾರಿದ್ದಾನೆ.
ಎಲ್ಲಾದರೂ ಸ್ವಲ್ಪ ಹಣ ಕಂಡರೆ ಸಾಕು ಬಾಯಿಹರುಕ ರಪ್ಪ ಅಲ್ಲಿ ಪ್ರತ್ಯಕ್ಷ. ಅದು ಖಾಲಿ ಮಾಡಲು ಬೇಕಾದ ಎಲ್ಲಾ ಆಲೋಚನೆ ಹೇಳಿ ಬಳಿಕ ಅಲ್ಲಿಂದ ನಾಪತ್ತೆ ಆಗೋದು ಆತನ ಚಾಳಿ. ಹೋಗಲಿ ಈಗ ಅದು ಇಲ್ಲಿ ಬೇಡ.
ಮೊನ್ನೆ ದಿನ ಎಲ್ಲೋ ಸುತ್ತಲು ಹೋಗಿ ಬರುವಾಗ ಸ್ವಲ್ಪ ತಡ ಆಗಿದೆ. ಗಡಿಬಿಡಿಯಲ್ಲಿ ಜತೆಗಿದ್ದ ತನ್ನ ಎಣ್ಣೆ ಬಳಗವನ್ನು ಎಳೆತಂದು ಮಂದ ಬೆಳಕಿನ ಕೋಣೆಗೆ 8.30 ಕ್ಕೆ ನುಗಿದ್ದ. ಬಂದವನೇ ತಾನು ಕುಡಿದು ತನ್ನವರಿಗೂ ಕುಡಿಸಿ ಅಮಲೇರಿಸಿಕೊಂಡಿದ್ದ. ಈ ನಡುವೆ ಖಾರವಾದ್ದು ಏನಾದರೂ ಬೇಕಲ್ಲಾ ಅದಕ್ಕೆ ಪನ್ನೀರ್ ಟಿಕ್ಕಾ ಒಂದು ಹೇಳಿದ. ಹಾಗೆಯೇ ಪಕ್ಕದ ಟೇಬಲ್ ನವರೂ ಪನೀರ್ ಟಿಕ್ಕಾ ಹೇಳಿದ್ದರು. ಪಾಪ ವೈಟರ್ ಗೆ ಟಿಕ್ಕಾ ಮಾತ್ರ ಕೇಳಿದ್ದಾ ಅಲ್ಲಾ ಅದಲು ಬದಲು ಆಯಿತಾ ಗೊತ್ತಿಲ್ಲ. ಪಕ್ಕದ ಟೇಬಲ್ ಗೆ ಪನೀರ್ ಬದಲು ಚಿಕನ್ ಸಪ್ಲೈ ಆಗಿತ್ತು. ಪನ್ನೀರ್ ಬಾಯಿಗೆ ಹಾಕಿ ಕೆಲವು ಸಲ ಜಗಿದಾಗ ಖಾಲಿ ಆಗುತ್ತೆ. ಇದೇನು ಖಾಲಿ ಆಗುತ್ತಿಲ್ಲ ಎಂಬ ಪ್ರಶ್ನೆಯನ್ನು ಕೇಳಿಯೇ ಬಿಟ್ಟ. ಅದರ ಪರೀಕ್ಷೆಗೆ ಮುಂದಾದಾಗ ಅದು ವೆಜ್ ಅಲ್ಲ ನಾನ್ ವೆಜ್ ಅಂತ ಗೊತ್ತಾಗಿದೆ. ಅವರದನ್ನು ವೇಟರ್ ಜತೆ ಮಾತನಾಡಿ ಪರಿಹಾರ ಮಾಡಿಕೊಂಡಿದ್ದಾರೆ.
ಆದರೆ ಅಮಲೇರಿದ ಎಡಬಿಡಂಗಿಗೆ ನಾಲಿಗೆ ತುರಿಕೆ ಹೆಚ್ಚಾಗಿ ತನಗೆ ಸಂಬಂಧಪಡದ ವಿಚಾರಕ್ಕೆ ನಾಲಿಗೆ ತುರುಕಿ ಗಲಾಟೆ ಆರಂಭಿಸಿದ. ಆದರೂ ಹೋಟೆಲ್’ನವರು ಈತನನ್ನು ಅವಡುಗಚ್ಚಿ ಸಹಿಸಿಕೊಂಡಿದ್ದರು. ಈ ಮಧ್ಯೆ ನಾಲ್ಕು ಬೀರ್ ಏರಿಸಿಕೊಂಡಿದ್ದವನಿಗೆ ಟಕ್ಕಿಲ ಬೇಕೆಂಬ ಮನಸ್ಸಾಗಿ ಅದನ್ನೂ ಉರ್ಪಿ ಖಾಲಿ ಮಾಡಿಯಾಗಿತ್ತು. ಆದರೂ ಆತನ ಮನಸಿಗೆ ಸಾಕೆಂದು ಅನಿಸಿರಲಿಲ್ಲ. ಕುಡಿದಷ್ಟು ನಾಲಿಗೆ ಹರಿತವಾಗಿ ಮತ್ತೆ ಮತ್ತೆ ಬೇಕೆಂದು ಕೇಳುತ್ತಾ ಗಂಟೆ 11 ಆಗುತ್ತಾ ಬಂದಿತ್ತು. ಅಹಂಕಾರದ ಜತೆಗೆ ಅಮಲು ಏರಿಸಿಕೊಂಡವನಿಗೆ ವೇಟರ್ ಬಂದು ಸಮಯ ಆಯ್ತು ಸರ್ ಇನ್ನಿಲ್ಲ ಅಂದಾಗ ತನ್ನ ಡಿಕ್ಸ್ನರಿ ಓಪನ್ ಮಾಡಿ ಪದ ಪುಂಜ ಹೊರ ಹಾಕಿ *** ಮಗಾ ಮಗಾ ಅಂದುಬಿಡಬೇಕೆ..! ಅಷ್ಟರವರೆಗೆ ಸಾಕಷ್ಟು ಸಹಿಸಿದ್ದ ವೇಟರ್ ತನ್ನ ರಟ್ಟೆ ಬಲ ಪ್ರದರ್ಶನ ಮಾಡಿಯೇ ಬಿಟ್ಟ…! ತಳ್ಳಾಟದ ಬಳಿಕ ಈ ಏರಿಯಾ, ಯಾನ್ ಮುಳ್ತ ಓಲ್ಡ್ ಕಸ್ಟಮರ್. ಕಾಲೇಜ್ ಪೋನಗನೇ ಯಾನ್ ಕಸ್ಟಮರ್ ಅನ್ನುವ ಡೈಲಾಗ್ ಬಿಟ್ಟು ಜಾಗ ಖಾಲಿ ಮಾಡಿದ್ದ.
ಈ ರಂಬಾರೂಟಿಯಿಂದ ಬಾರ್’ನ ರೆಪ್ಯುಟೇಶನ್ ಗೆ ದಕ್ಕೆ ಆಯಿತು ಅಂತ ಬೆಚ್ಚಗೊಂಡ ಬಾರ್ ಮಾಲಕರು ವೇಟರ್ ಗೆ ಆಸ್ಪತ್ರೆಯಲ್ಲಿ ಮಲಗಲು ಹೇಳಿದ್ದಾರೆ. ದೂರು ಕೊಡಿಸಿ ಇದ್ದ ಬದ್ದ ಕೇಸು ಪೂರಾ ಹಾಕಿಸಿದ್ದಾರೆ. ಹಾಕಿದ ಅಮಲು ಇಳಿದ ಬಳಿಕ ತಾನು ಜಗಳಾಡಿದ್ದು ಜನ ಯಾರೆಂದು ತಿಳಿದು ಕಾಲ್ ಮಾಡಿ ಪ್ಲೀಸ್ ಪ್ಲೀಸ್ ಅಂದಿದ್ದಾನೆ. ಆದರೆ ರೈಸಿದ್ದು ಜಾಸ್ತಿ ಆದ ಕಾರಣ ಈತನಿಗೆ ಒಂದು ಪಾಠ ಮಾಡಿದರೆ ಸೈ ಅಂತ ನಿರ್ಧಾರ ಆಗಿದೆ ಅಂತ ಬೋಂಟೆಗೆ ಬಂದ ಮಾಹಿತಿ.ಇದ್ದ ಬದ್ದ ಕೇಸು ಹಾಕಿಸಿಕೊಂಡ ಪುಳಿಚ್ಚಾರ್ ಮನೆ ಬಿಟ್ಟು “ದಾರಿ ಕಾಣದಾಗಿದೆ” ಅಂತ ಭಜನೆ ಮಾಡಿಕೊಂಡು ಕೂತಿದ್ದಾನೆಂದು ಬೋಂಟೆಗೆ ಮಾಹಿತಿ ಬಂದಿದೆ.
ಗೂರ್ಖಾ ಪಡೆ ಈ ರೌಡಿರಾಜನ ಪುಕ್ಕ ಕೀಳುತ್ತಾ, ಇಲ್ಲಾ ಎಡಬಿಡಂಗಿ ಜತೆಗೆ ಗಡಂಗಿನಲ್ಲಿ ಕೂತು ರಾಜಿ ಪಂಚಾಯಿತಿಗೆ ನಡೆಸಿ ಕುಡುಕನ ಬ್ರಾಹ್ಮಣತ್ವ ಪುನಃ ಪ್ರತಿಷ್ಠೆ ಮಾಡುತ್ತಾ ಎಂಬುದು ಯಕ್ಷ ಪ್ರಶ್ನೆಯಾಗಿದೆ…!!