ಚೀನನ ಸುಲಿಗೆ ಸಾಮ್ರಾಜ್ಯ: ಕಾರ್ಯನಿರತರ ಸಂಘದಲ್ಲಿ ನಡೆಯುತ್ತಿರುವ ವಸೂಲಿ ಆಟಕ್ಕೆ ಅಂತ್ಯ ಯಾವಾಗ!?

ಸಮಾಜದ ಅಂಕುಡೊಂಕುಗಳನ್ನು ತಿದ್ದುವ, ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಲೇಖನಿಕಾರರು ತಮ್ಮದೇ ಆದ ಸಂಘವನ್ನು ಕಟ್ಟಿಕೊಂಡಿದ್ದಾರೆ. ಆದರೆ, ಈ ಸಂಘದಲ್ಲೀಗ ‘ವಸೂಲಿ ಗ್ಯಾಂಗ್’ ಎಂಬ ಅಕ್ರಮ ಸಾಮ್ರಾಜ್ಯವೊಂದು ತಲೆ ಎತ್ತಿದೆ. ಈ ಗ್ಯಾಂಗ್ನ ಕಿಂಗ್ಪಿನ್ ಚೀನ, ಸಂಘದ ಸದಸ್ಯರನ್ನೇ ಮಂಗ ಮಾಡಿ ಕೋಟಿಗಟ್ಟಲೆ ಹಣ ಬಾಚಿಕೊಂಡಿದ್ದಾನೆ ಎನ್ನಲಾಗಿದೆ.

ಈ ವಾರಾಂತ್ಯದಲ್ಲಿ ನಡೆಯಲಿರುವ ಕಾರ್ಯನಿರತರ ಸಂಘದ ಚುನಾವಣೆಯ ಕಾವು ಏರುತ್ತಿದ್ದಂತೆ, ಚೀನನ ಕರಾಳ ಮುಖ ಬಯಲಾಗುತ್ತಿದೆ. ವಸೂಲಿ ಗ್ಯಾಂಗ್ ತಮ್ಮ ಆಟ ನಡೆಯುವುದಿಲ್ಲ ಎಂದು ತಿಳಿದು, ಇದೀಗ ಹೊಸ ತಂತ್ರ ಹೆಣೆದಿದೆ. ಒಬ್ಬ ಸಜ್ಜನ, ಮಿತಭಾಷಿ ಹಾಗೂ ಶುದ್ಧ ಹಸ್ತದ ವ್ಯಕ್ತಿಯನ್ನು ಅಧ್ಯಕ್ಷ ಸ್ಥಾನಕ್ಕೆ ನಿಲ್ಲಿಸಿ, ಅವರನ್ನು ‘ನಾಮ್ ಕೇ ವಾಸ್ತೇ’ ಅಧ್ಯಕ್ಷರನ್ನಾಗಿ ಮಾಡಿ, ತೆರೆಮರೆಯಲ್ಲಿ ತಮ್ಮ ವಸೂಲಿ ದಂಧೆಯನ್ನು ಮುಂದುವರಿಸಲು ಚೀನ ಪಡೆ ಸ್ಕೆಚ್ ಹಾಕಿದೆ.

ಕಳೆದ ಹಲವು ವರ್ಷಗಳಿಂದ ಅಧ್ಯಕ್ಷ ಸ್ಥಾನದ ನೆರಳಿನಲ್ಲಿ ಚೀನ ನಡೆಸಿದ ವಸೂಲಿ ದಂಧೆಯಿಂದ ಬರೋಬ್ಬರಿ ಅರ್ಧ ಕೋಟಿಗೂ ಹೆಚ್ಚು ಹಣವನ್ನು ಗುಳುಂ ಮಾಡಿದ್ದಾನೆ. ಈಗ ಚುನಾವಣೆಯನ್ನು ನೆಪವಾಗಿಟ್ಟುಕೊಂಡು ಮತ್ತೆ ವಸೂಲಿಗೆ ಇಳಿದಿದ್ದಾನೆ. ಎರಡು ಶಾಸಕರು, ರಾಜಕಾರಣಿಗಳು ಮತ್ತು ಉದ್ಯಮಿಗಳಿಂದ ಲಕ್ಷ ಲಕ್ಷ ಹಣ ಪೀಕಿಸಲು ಮುಂದಾಗಿರುವುದು ಗುಟ್ಟಾಗಿ ಉಳಿದಿಲ್ಲ. “ಗ್ರಾಮೀಣ ಲೇಖನಿಕಾರರನ್ನು ಚುನಾವಣೆಗೆ ಕರೆತರಲು ವಾಹನ, ಊಟದ ವ್ಯವಸ್ಥೆ ಬೇಕು, ಸಂಘದಲ್ಲಿ ಹಣವಿಲ್ಲ” ಎಂದು ಧನಿಕರ ಮುಂದೆ ಕೈಯೊಡ್ಡಿದ್ದಾನೆ.

ಮಂಗಳೂರಿನ ಪ್ರಸಿದ್ಧ ಬಿಲ್ಡರ್ನಿಂದ 3 ಲಕ್ಷ, ಸಹಕಾರಿಯೊಂದರ ಅಧ್ಯಕ್ಷನಿಂದ 50 ಸಾವಿರ, ನಗರದ ಪ್ರಸಿದ್ಧ ಶಿಕ್ಷಣ ವ್ಯಾಪಾರಿಯಿಂದ 50 ಸಾವಿರ, ಉಳ್ಳಾಲದ ವಿದೇಶಿ ಉದ್ಯಮಿಯಿಂದ 1 ಲಕ್ಷ, ಮೂಲ್ಕಿಯ ಮುಂಬೈ ಉದ್ಯಮಿಯಿಂದ 60 ಸಾವಿರ, ಸಿವಿಲ್ ಕಂಟ್ರಾಕ್ಟರ್ನಿಂದ 50 ಸಾವಿರ ಹೀಗೆ ಕೋಟ್ಯಂತರ ರೂಪಾಯಿ ವಸೂಲಿ ಮಾಡಿ ತನ್ನ ಜೇಬಿಗೆ ಇಳಿಸಿಕೊಂಡಿದ್ದಾನೆ. ಬಂಟ್ವಾಳ ಮೂಲದ ಇಬ್ಬರು ಬಿಲ್ಡರ್ಗಳು ಚೀನನ ದಂಧೆ ಅರಿತು ಕೈಕೊಟ್ಟಿದ್ದಾರೆ. ಈ ವಸೂಲಿ ಹಣ ಚುನಾವಣೆ ದಿನ ಲೇಖನಿಕಾರರಿಗೆ ತಲುಪುತ್ತಾ ಅಥವಾ ಚೀನನ ಟೀಮ್ ಖಾಲಿ ಮಾತಿನಲ್ಲೇ ಹೊಟ್ಟೆ ತುಂಬಿಸುತ್ತಾ ಕಾದು ನೋಡಬೇಕು.

ಕಾರ್ಯನಿರತ ಲೇಖನಿಕಾರರ ನಿವೇಶನ ಹೆಸರಲ್ಲಿ ಪಂಗನಾಮ!
ಚೀನನಿಗೆ ಭರವಸೆಗಳನ್ನು ನೀಡಿ ಜನರನ್ನು ಮಂಗ ಮಾಡುವ ವಿದ್ಯೆಯಲ್ಲಿ ರಾಜಕೀಯದವರನ್ನೂ ಮೀರಿಸಬಲ್ಲವ. ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ 40ಕ್ಕೂ ಅಧಿಕ ಲೇಖನಿಕಾರರಿಗೆ ನಿವೇಶನ ನೀಡುವ ಭರವಸೆಯನ್ನು ಚೀನ ಅಂಡ್ ಟೀಮ್ ನೀಡಿತ್ತು. ಆದರೆ ಚೀನ ಅಂಡ್‌ ಟೀಮ್‌ ನ ಅಧಿಕಾರವಾಧಿ 6-7 ವರ್ಷ ವ್ಯಾಲಿಡಿಟಿ ಹೊಂದಿದ್ದರೂ, ಆ ಬಗ್ಗೆ ಏನೂ ಮಾಡದೇ ಈ ಭರವಸೆ ಠುಸ್ ಆಗಿ, ಇದರ ಕಡತ ಮಂಗಳೂರು ಡಿಸಿ ಕಚೇರಿ ಮೂಲೆಯಲ್ಲಿ ಬಿದ್ದಿದೆ. “ನಿವೇಶನ ಬಂತು ಬಂತು” ಎಂದು ಚೀನ ಗ್ರೂಪಿನ ‘ಮೊಸಳೆ ಬಂತು ಮೊಸಳೆ ಕಥೆ’ ಬಯಲಾಗಲು ಇಷ್ಟು ವರ್ಷವೇ ಬೇಕಾಯಿತು. ಈ ನಿವೇಶನ ಡಿಸಿ ಮನ್ನಾ ಭೂಮಿ ಹಾಗೂ ಪಾಲಿಕೆ ಬಫರ್ ಝೋನ್ನಲ್ಲಿರುವುದರಿಂದ ರಿಜೆಕ್ಟ್ ಆಗಿದೆ ಎಂದು 2 ವರ್ಷದ ಹಿಂದೆಯೇ ಸಂಬಂಧಿಸಿದ ಇಲಾಖೆ ಹಿಂಬರಹ ನೀಡಿತ್ತು. ಆದರೆ, ಈ ವಿಚಾರ ಸಂಘದ ಸದಸ್ಯರಿಗೆ ಗೊತ್ತಾದರೆ ಮುಂದಿನ ಚುನಾವಣೆಯಲ್ಲಿ ಹಿನ್ನಡೆಯಾಗುತ್ತೆ ಎಂಬ ಭಯದಲ್ಲಿ ಗೌಪ್ಯವಾಗಿ ಇಡಲಾಗಿತ್ತು.

‘ಯಾರದ್ದೋ ಮಕ್ಕಳಿಗೆ ಯಾರೋ ಅಪ್ಪ’
ಚೀನಪ್ಪನ ಬಳಗ ‘ಯಾರದ್ದೋ ಮಕ್ಕಳಿಗೆ ಯಾರೋ ಅಪ್ಪ’ ಆದದ್ದೇ ಜಾಸ್ತಿ. ನಗರವಾಸಿ ಬಹುತೇಕ ಸದಸ್ಯರಿಗೆ ಚೀನ ಗ್ಯಾಂಗ್ನ ಹಣೆಬರಹ ತಿಳಿದಿದೆ ಎಂದು ತಿಳಿದ ಈ ಗ್ಯಾಂಗ್, ಗ್ರಾಮೀಣ ಭಾಗದ ಸಂಘದ ಸದಸ್ಯರಿಗೆ ಕೂರಲು ಲೇಖನಿ ಕ್ಲಬ್ ಕಟ್ಟಿಸಿಕೊಡುವ ಭರವಸೆ ನೀಡಿ ಮಂಗ ಮಾಡಿದೆ. ಆದರೆ, ಇದನ್ನು ತಿಳಿಯದ ಗ್ರಾಮೀಣ ಲೇಖನಿಕಾರರು ಮಾತ್ರ ‘ಸೀನ ಕಿ ಜೈ, ಅಣ್ಣಾ ಕಿ ಜೈ’ ಎಂದು ಹಾಕಿದ್ದಾರೆ.
ಗ್ರಾಮೀಣ ಭಾಗದ ತಾಲೂಕು ಲೇಖನಿಕಾರರು ತಮ್ಮ ತಾಲೂಕು ಘಟಕದಲ್ಲಿ ಕಷ್ಟಪಟ್ಟು ಆಯೋಜಿಸಿದ ಅಭಿಯಾನ, ಕಾರ್ಯಕ್ರಮಗಳಲ್ಲಿ ‘ವಸೂಲಿ ಗ್ಯಾಂಗ್’ ಕೂತು ಫೋಟೋ ತೆಗೆದು, ಇಡೀ ಕಾರ್ಯಕ್ರಮವನ್ನೇ ಹೈಜಾಕ್ ಮಾಡಿದೆ. ಬಹಳ ವರ್ಷದ ಹಿಂದೆ ಪುತ್ತೂರು, ಸುಳ್ಯ, ಬೆಳ್ತಂಗಡಿ ಲೇಖನಿಕಾರರು ಕಷ್ಟಪಟ್ಟು ಆಯೋಜಿಸಿದ ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳೆಲ್ಲ ಚೀನಪ್ಪನ ಕಾರ್ಯಕ್ರಮ ಎಂದು ರಾಜಾಧ್ಯಕ್ಷರ ಕಿವಿಯೂದಿ ಅವರಿಂದ ಭೇಷ್ ಎನಿಸಿಕೊಂಡಿದ್ದಿದೆ.
ಇತ್ತೀಚಿಗೆ ಎಂಎಲ್ಸಿ ಒಬ್ಬರು ದೀಪಾವಳಿ ಹಿನ್ನೆಲೆಯಲ್ಲಿ ಲೇಖನಿಕಾರರಿಗೆ ಚೀನ ಟೀಮ್ ಮೂಲಕ ಕಳುಹಿಸಿಕೊಟ್ಟ ಡ್ರೈ ಫ್ರೂಟ್ ಗಿಫ್ಟ್ ಬಾಕ್ಸ್ ಹಲವೆಡೆ “ನಾನೇ ನೀಡಿದ್ದು” ಅಂತ ಬಿಲ್ಡಪ್ ಕೊಟ್ಟಿದ್ದಾನೆ. “ಯಾರು ಗುರುತಿಸದ ಗ್ರಾಮೀಣ ಲೇಖನಿಕಾರರ ಹೆಸರನ್ನು ನಾನು ಎಂಎಲ್ಸಿಗಳಿಗೆ ನೀಡಿದ್ದರಿಂದ ನಿಮಗೆ ಈ ಗಿಫ್ಟ್ ತಲುಪಿದೆ” ಎಂದು ಗ್ರಾಮೀಣ ಭಾಗದ ಮುಗ್ಧ ಸಂಘದ ಸದಸ್ಯರಿಗೆ ಹೇಳುವ ಚೀನ, ಅವರ ಮುಗ್ಧತೆಯನ್ನು ಚುನಾವಣೆ ವೇಳೆ ವೋಟ್ಬ್ಯಾಂಕ್ ಆಗಿ ಬಳಸಿಕೊಂಡಿದ್ದಾನೆ.

ಬರೆಯಲು ತಿಳಿಯದ ಚೀನಪ್ಪ:
ಸೆಟಲೈಟ್ ಚಾನಲ್ ಗಳ ಉದಯ ಸಂದರ್ಭ ಕಂಡೆ ಹಿಡಿದು ಓಡಾಡಿ, ಅಸ್ತಂಗತವಾದ ಮೇಲೆ ನೆಲೆಯಿಲ್ಲದೆ ಚೀನ ವಸೂಲಿ ಗ್ಯಾಂಗ್ ಕಟ್ಟಿಕೊಂಡಿದ್ದಾನೆ ಎಂಬ ಮಾತಿದೆ. ಈಗ ಹೆಸರಿಗೆ ಲೇಖನಿ ಪ್ರತಿನಿಧಿಯಾದರೂ ಬರೆಯಲು ತಿಳಿಯದೇ, ಬಂದಂತೆ ಪಾರ್ವರ್ಡ್ ಮಾಡುವ ಕಾಕನಾಗಿದ್ದಾನೆ. ಐದಾರು ವರ್ಷಗಳಿಂದ ಕಾರಿನ ಮುಂದೆ ವಿವಿಧ ಕಂಡೆ ಇಟ್ಟು ಫೋಸ್ ಕೊಡುವ ಕಾಯಕವೇ ಹೆಚ್ಚಾಗಿದೆ. ಚೀನಪ್ಪನಿಗೆ ಹೆಸರು, ಹುದ್ದೆ ಶಾಶ್ವತವಾಗಿ ಉಳಿಯಬೇಕೆಂದು ಯಾರು ಏನು ಹೇಳಿದರೂ ಎಚ್ ಎಚ್ ಎಂದು ಜೊಲ್ಲು ಸುರಿಸೋದೇ ಆಗಿದೆ.

ಪ್ರತಿ ಬಾರಿಯೋ ಕೋತಾ ಬಜೆಟ್!
ಚೀನ ಅಧ್ಯಕ್ಷನಾದ ಬಳಿಕ ವರ್ಷಕ್ಕೊಂದು ಅದ್ದೂರಿ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದಾನೆ. ಆದರೆ ಕಾರ್ಯಕ್ರಮ ಬಳಿಕ ಖರ್ಚು ಮಾತ್ರ ಕೋತಾ ಆಗಿರುತ್ತೆ. ಅವರಿಂದ ಬರಬೇಕು, ಇವರಿಂದ ಬರಬೇಕು ಎಂದು ಹೇಳಿದ್ದೇ ಹೊರತು, ಬಂದ ಬಳಿಕದ ಲೆಕ್ಕ ಇಲ್ಲಿವರೆಗೆ ಹೊರ ಬಂದಿಲ್ಲ. ಹಾಗಾದರೆ ಅದರಲ್ಲೂ ವಸೂಲಿ ಮಾಡಿ ಗ್ಯಾಂಗ್ ಜೀವನ ನಡೆಸುತ್ತಿದೆಯಾ?

ಗ್ಯಾಂಗ್ ಪ್ರಮುಖನೇ ಎಲ್ಲಾ ಕಡೆ ಅಧ್ಯಕ್ಷ
ಕಾರ್ಯನಿರತ ಸಂಘದಲ್ಲಿ ಚೀನ ಅಧ್ಯಕ್ಷನಾದ ಬಳಿಕ ಲಾಭದಾಯಕ ಉದ್ಯಮ ಯಶಸ್ವಿಯಾಗಿ ನಡೆಯುವ ವಿಚಾರ ತಿಳಿದು ಗೃಹ ನಿರ್ಮಾಣ ಸಂಘವನ್ನು ಸ್ಥಾಪಿಸಲಾಯಿತು. ಇದರಲ್ಲೂ ಚೀನ ತಾನೇ ಅಧ್ಯಕ್ಷನಾಗುವ ಮೂಲಕ ಇಲ್ಲೂ ತನ್ನಚಾಳಿಯನ್ನು ಮುಂದುವರಿಸಿದ್ದಾನೆ. ಜಾಗ ನೀಡುವುದಕ್ಕೆ ಮುಖ್ಯಮಂತ್ರಿಗಳಿಗೆ ಮನ ಮಾಡುವ ನಿಟ್ಟಿನಲ್ಲಿ ಇತ್ತೀಚೆಗೆ ಪುತ್ತೂರಿನಲ್ಲಿ ಸಿಎಂ ಕಾರ್ಯಕ್ರಮದ ವೇದಿಕೆ ಏರಿದ ಚೀನ, ಕೂರಲು ಖುರ್ಚಿ ಸಿಗದೆ ಮುಖ ಉಜ್ಜಿಕೊಂಡು ವೇದಿಕೆಯಿಂದ ಇಳಿದಿದ್ದಾನೆಂದು ಹೇಳಲಾಗಿದೆ.

ಭ್ರಷ್ಟಾಚಾರದ ವಿರುದ್ಧ ಕಾರದಲ್ಲಿ ಬರೆಯುವ, ಸಮಾಜದ ಅಂಕುಡೊಂಕು ತಿದ್ದುವ ಲೇಖನಿ, ವಸೂಲಿ ಗ್ಯಾಂಗ್ ಬಗ್ಗೆ ಚಕಾರ ಎತ್ತದಿರುವುದು ನಿಜಕ್ಕೂ ಖೇದಕರ. ಕಳೆದ ಹಲವು ವರ್ಷಗಳಿಂದ ಆತನನ್ನು ಬೆಂಬಲಿಸಿ ವಸೂಲಿಗೆ ಪ್ರೋತ್ಸಾಹ ನೀಡಿದ ಲೇಖನಿಕಾರರು ಕಾರ್ಯನಿರತರ ಸಂಘದ ಚುನಾವಣೆ ಚೀನನ ಸುಲಿಗೆ ಸಾಮ್ರಾಜ್ಯಕ್ಕೆ ಅಂತ್ಯ ಹಾಡಿ ಹೊಸ ಅಧ್ಯಾಯವನ್ನು ಬರೆಯುತ್ತಾ ಎಂಬುದನ್ನು ಕಾದು ನೋಡಬೇಕು.

Leave a Comment